ಶ್ರೀ.ಕಬ್ಬಾಳಮ್ಮ ದೇವಾಲಯ
ಶ್ರೀ.ಕಬ್ಬಾಳಮ್ಮ ದೇವಾಲಯ
ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿರುವ ಶ್ರೀ. ಕಬ್ಬಾಳಮ್ಮ ದೇವಾಲಯವು ಐತಿಹಾಸಿಕ ಮಹತ್ವವನ್ನು ಹೊಂದಿರುವ ಧಾರ್ಮಿಕ ಪ್ರವಾಸಿ ಕ್ಷೇತ್ರ. ಈ ದೇವಾಲಯಕ್ಕೆ ಕೇವಲ ರಾಜ್ಯದ ಪ್ರವಾಸಿಗರಲ್ಲದೆ ಹೊರ ರಾಜ್ಯಗಳಿದಲೂ ಪ್ರವಾಸಿಗರು ಬೇಟಿನೀಡುತ್ತಾರೆ. ರಾಜ್ಯ ರಾಜ ಧಾನಿಯಿಂದ 80 ಕಿ.ಮೀದೂರದಲ್ಲಿರುವ ಈ ದೇವಾಲಯ ಬೆಂಗಳೂರು-ಮೈಸೂರು ರಸ್ತೆಯ ಚನ್ನಪಟ್ಟಣದಿಂದ 28 ಕಿ.ಮೀ ದೂರದಲ್ಲಿದೆ. ಕಬ್ಬಾಳಮ್ಮನು ಪ್ರಕೃತಿಯ ಮಡಿಲಿನಲ್ಲಿ ಬೆಟ್ಟಗುಡ್ಡಗಳ ಮಧ್ಯದಲ್ಲಿ, ಕೆರೆತೊರೆಗಳ ನಡುವೆ ನೆಲೆಸಿ ಭಕ್ತರ ಇಷ್ಟಾರ್ಥ ಈಡೇರಿಸುತ್ತಿದ್ದಾಳೆ. ಶಕ್ತಿ ದೇವತೆಯ ತಾಣವಾದ ಈದೇವಾಲಯಕ್ಕೆ ಸುಮಾರು 200 ವರ್ಷಗಳ ಇತಿಹಾಸವಿದೆ. ಈ ದೇವಿಯ ಮೂಲ ನೆಲೆ ತಮಿಳುನಾಡು ರಾಜ್ಯ. ಈ ತಾಯಿಯು ತನ್ನ ಪರಿವಾರದ ದೇವರುಗಳೊಂದಿಗೆ ಲೋಕಸಂಚಾರಕ್ಕಾಗಿ ಬಂದಾಗ ಕಬ್ಬಾಳು ಊರಿನ ಬಳಿಮಳೆಯು ಸುರಿಯಲಾರಂಭಿಸುತ್ತದೆ. ಈ ಸಂದರ್ಭದಲ್ಲಿ ಅಡಿಕೆ ತೋಟ ಒಂದರಲ್ಲಿ ನೆಲೆಸುತ್ತಾಳೆ. ನಂತರ ಊರಿನ ಗ್ರಾಮದೇವತೆಗಳ ಆಶ್ರಯ ಪಡೆದು ಅದೇ ಸ್ಥಳದಲ್ಲಿ ಶಾಶ್ವತವಾಗಿ ನೆಲೆನಿಲ್ಲುತ್ತಾಳೆ. ದೇವಿಯು ಕಬ್ಬಾಳು ಎಂಬ ಗ್ರಾಮದಲ್ಲಿ ನೆಲೆ ನಿಂತಿರುವುದರಿಂದ ಇಂದಿಗೂ ಕಬ್ಬಾಳಮ್ಮಎಂದೇ ಪ್ರಸಿದ್ಧಿಯಾಗಿದ್ದಾಳೆ.
ಕಬ್ಬಾಳು ಗ್ರಾಮದಲ್ಲಿ ಕಬ್ಬಾಳು ದುರ್ಗವೆಂಬ ಏಳು ಸುತ್ತಿನ ಕೋಟೆ ಇದೆ. ಕಬ್ಬಾಳು ದುರ್ಗವನ್ನು ಮೈಸೂರು ಅರಸರು, ಹೈದರಾಲಿ, ಟಿಪ್ಪಿಸುಲ್ತಾನರ ಆಳ್ವಿಕೆಯಕಾಲದಲ್ಲಿ ರಾಜಕಾರಾಗೃಹವಾಗಿ ಬಳಸಲಾಗುತ್ತಿತ್ತು. ಕೈದಿಗಳನ್ನು ಬೆಟ್ಟದ ಮೇಲಿಂದ ತಳ್ಳಿ ಮರಣ ದಂಡನೆಯನ್ನು ನೀಡಲಾಗುತ್ತಿತ್ತು. ಒಮ್ಮೆ ಒಬ್ಬ ಕೈದಿಯನ್ನು ಬೆಟ್ಟದ ಮೇಲಿಂದ ತಳ್ಳುತ್ತಾನೆ ಅಪಾರ ದೈವಭಕ್ತನಾದ ಕೈದಿ ತನ್ನನ್ನು ಕಾಪಾಡುವಂತೆ ಕಬ್ಬಾಳಮ್ಮನನ್ನು ಬೇಡುತ್ತಾನೆ. ಕೈದಿಯನ್ನು ಮೇಲಿಂದ ತಳ್ಳಿದರೂ ಏನೂ ಆಗದಂತೆ ಕಬ್ಬಾಳಮ್ಮ ಕಾಪಾಡುತ್ತಾಳೆ. ತಾಯಿಯ ಪವಾಡವನ್ನು ನೋಡಿದ ಆ ಕೈದಿ ಕಬ್ಬಾಳಮ್ಮನಿಗೆ ಚಿನ್ನದ ಕಿರೀಟ ಮತ್ತು ಚಿನ್ನದ ಹಾರ ಅರ್ಪಿಸುತ್ತಾನೆ. ಇಂದಿಗೂ ಈ ಚಿನ್ನದ ಕಿರೀಟವನ್ನು ಶಿವರಾತ್ರಿಯ ಸಂದರ್ಭದಲ್ಲಿ ದೇವಿಗೆ ತೊಡಿಸಲಾಗುತ್ತದೆ. ದೇವಾಲಯದಲ್ಲಿ ಇತ್ತೀಚೆಗೆ ನಂದಿಯೊಂದು ವಾಸವಾಗಿದೆ. ದೇವಿಯ ಅನುಗ್ರಹ ನಂದಿಗೆ ಇದೆ ಎಂದು ನಂಬಿದ ಜನರು ಹರಕೆ ಹೊರುತ್ತಾರೆ. ಆ ಸಂದರ್ಭದಲ್ಲಿ ನಂಧಿಯ ಮುಂದೆ ಮಲಗುತ್ತಾರೆ. ಆಗ ನಂಧಿ ಅವರ ಮೇಲೆ ಹತ್ತಿ ನಡೆದು ಹೋಗುತ್ತದೆ. ಇದರಿಂದ ಹರಕೆ ಸಿದ್ಧಿಸುತ್ತದೆ ಎಂಬುದು ಜನರನಂಬಿಕೆ. ಸುತ್ತ 28 ಹಳ್ಳಿಗೆ ಇದೊಂದೇ ದೊಡ್ಡ ದೇವಾಲಯವಾಗಿದ್ದು, ಶಿವರಾತ್ರಿಯ ಸಂದರ್ಭದಲ್ಲಿ ನಡೆಯುವ ಜಾತ್ರೆಗೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ದೀಪಾವಳಿ-ಕೊನೆಯ ಕಾರ್ತಿಕದ ದಿನ ಹಾಗೂ ಶಿವರಾತ್ರಿಯ ದಿನ ವರ್ಷದಲ್ಲಿ ಎರಡು ಅಗ್ನಿ ಕೊಂಡ ಮಾಡಲಾಗುತ್ತದೆ. ಶಿವರಾತ್ರಿಯಲ್ಲಿ 5 ದಿನಗಳು ಜಾತ್ರೆ ಅದ್ದೂರಿಯಿಂದ ಜರುಗುತ್ತದೆ.
ಹತ್ತಿರದ ಪ್ರವಾಸಿ ಸ್ಥಳಗಳು.
- ಕೆಂಗಲ್ ಆಂಜನೇಯ ದೇವಾಲಯ: ಕಬ್ಬಾಳಮ್ಮ ದೇವಾಲಯದಿಂದ 15 ಕಿ.ಮೀ. ದೂರದಲ್ಲಿರುವಈ ಆಂಜನೇಯ ದೇವಾಲಯ ಪ್ರಮುಖ ಧಾಮಿಕ ಸ್ಥಳವಾಗಿದೆ.
- ಅಪ್ರಮೇಯ ದೇವಸ್ಥಾನ: ಕಬ್ಬಾಳಮ್ಮ ದೇವಾಲಯದಿಂದ 20 ಕಿ.ಮೀ. ದೂರದಲ್ಲಿರುವ ಅಪ್ರಮೇಯ ದೇವಸ್ಥಾನ ಪುರಾತನವಾದ ಅಂಬೆಗಾಲು ಕೃಷ್ಣನ ದೇವಾಲಯವಾಗಿದೆ.
- ಸಂಗಮ- ಮೇಕೆದಾಟು: ಕಬ್ಬಾಳಮ್ಮ ದೇವಾಲಯದಿಂದ 30 ಕಿ.ಮೀ. ದೂರದಲ್ಲಿರುವ ಇದು ಅರ್ಕಾವತಿ ಮತ್ತು ಕಾವೇರಿ ನದಿಯ ಸಂಗಮ ಸ್ಥಳ ಇದಾಗಿದ್ದು ಜಲಕ್ರೀಡಾ ಸ್ಥಳವಾಗಿದೆ.
- ಜಾನಪದ ಲೋಕ: ಕಬ್ಬಾಳಮ್ಮ ದೇವಾಲಯದಿಂದ ದಿಂದ 30 ಕಿ.ಮೀ. ದೂರದಲ್ಲಿರುವ ಜಾನಪದ ಲೋಕ ಕನಾಟಕದ ಜಾನಪದ ಕಲೆ ಸಂಸ್ಕೃತಿ ಬುಡಕಟ್ಟು ಜನಾಂಗಗಳ ಜೀವನ ಶೈಲಿಯನ್ನು ಪ್ರತಿಬಿಂಬಿಸುವ ಸ್ಥಳವಾಗಿದೆ.
- ಚುಂಚಿ ಜಲಪಾತ: ಕಬ್ಬಾಳಮ್ಮ ದೇವಾಲಯದಿಂದ 25 ಕಿ.ಮೀ. ದೂರದಲ್ಲಿರುವ ಚುಂಚಿ ಜಲಪಾತ ಆಕರ್ಷಣೀಯ ಪ್ರವಾಸಿ ತಾಣವಾಗಿದೆ.
ಹತ್ತಿರದ ವಸತಿ ವ್ಯವಸ್ಥೆಗಳ ವಿವರ –
ಕ್ರ.ಸಂ |
ಹೋಂ ಸ್ಟೇ ಹೆಸರು |
ವಿಳಾಸ |
ಮೊಬೈಲ್ ಸಂಖ್ಯೆ |
1 |
ತಪ್ಪಲು ಹೋಂ-ಸ್ಟೇ |
ಮರಳೇಬೇಕೊಪ್ಪೆಗ್ರಾಮ ಮತ್ತು ಅಂಚೆ, ಕನಕಪುರ ತಾ||, ರಾಮನಗರ ಜಿಲ್ಲೆ. |
9535321678 |
2 |
ಬ್ಯಾಕ್‌ಯಾರ್ಡ್ ಕ್ಯಾಂಪ್ ಹೋಂ-ಸ್ಟೇ” |
ನಾಯಕನಹಳ್ಳಿ ಗ್ರಾಮ ಉಯ್ಯಂಬಳ್ಳಿ ಹೋಬಳಿ, ಕನಕಪುರ ತಾಲ್ಲೂಕು ರಾಮನಗರ ಜಿಲ್ಲೆ, |
9886169698 |
3 |
ದೇವ್ ಫಾರಂ ಹೋಂಸ್ಟೇ |
ತೆಂಗನಾಯ್ಕನಹಳ್ಳಿ ಗ್ರಾಮ ಸಾತನೂರು ಹೋಬಳಿ, ಕನಕಪುರ ತಾಲ್ಲೂಕು ರಾಮನಗರ ಜಿಲ್ಲೆ. |
7760557582 |
4 |
ಕ್ಯಾಪರ್ಸ್ ಕ್ರೀಕ್ ಹೋಂಸ್ಟೇ |
ಕಂಚನಹಳ್ಳಿ ಗ್ರಾಮ ಸಾತನೂರು ಹೋಬಳಿ, ಕನಕಪುರ ತಾಲ್ಲೂಕು ರಾಮನಗರ ಜಿಲ್ಲೆ. |
6364666661 |
5 |
ನಮ್ಮೂರ ಇಕೋ ಸ್ಟೇ ಹೋಂಸ್ಟೇ |
ಕೂತಗೊಂಡನಹಳ್ಳಿ ಗ್ರಾಮ ಕಸಬಾ ಹೋಬಳಿಕನಕಪುರ ತಾಲ್ಲೂಕು ರಾಮನಗರ ಜಿಲ್ಲೆ. |
9742004488 |
6 |
ಸ್ಟೇ ಇನ್ ವೈಲ್ಡ್ ಹೋಂಸ್ಟೇ |
ಮಡಿವಾಳ ಗ್ರಾಮ ಉಯ್ಯಂಬಳ್ಳಿ ಹೋಬಳಿ, ಕನಕಪುರ ತಾಲ್ಲೂಕು ರಾಮನಗರ ಜಿಲ್ಲೆ. |
9886644259 |
7 |
ಲೇಕ್ ವ್ಯೂ ಹೋಂಸ್ಟೇ |
ಅಣಜವಾಡಿ ಗ್ರಾಮ, ಕಸಬಾ ಹೋಬಳಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ. |
9980759233 |
8 |
ಡಿವೈನ್ ಹೋಂಸ್ಟೇ |
ಮರಳೇಬೇಕುಪ್ಪೆಗ್ರಾಮ, ಉಯ್ಯಂಬಳ್ಳಿ ಹೋಬಳಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ. |
7411491033 |
ಕ್ರ.ಸಂ |
ಹೋಟೆಲ್/ರೆಸಾರ್ಟ ಹೆಸರು |
ವಿಳಾಸ |
ಮೊಬೈಲ್ ಸಂಖ್ಯೆ |
9 |
(ಆಮೆಗುಂಡಿ) ಇನ್ಸ್ ಪೈರ್ ಎಕೋ ಟೂರಿಸಂ ರೆಸಾರ್ಟ್ಸ್ |
ಕೆರಳಾಳುಸಂದ್ರ ಗ್ರಾಮ, ಕಸಬಾ ಹೋಬಳಿ, ಕನಕಪುರ ತಾ||, ರಾಮನಗರ ಜಿಲ್ಲೆ. |
9740085461 |
10 |
ಎಸ್.ವಿ ಸ್ಕೈಬ್ಲೂ ಆರ್ಚಿಡ್ಸ್ |
ಹನುಮನಹಳ್ಳಿಗ್ರಾಮ, ಕಸಬಾಹೋಬಳಿ, ಕನಕಪುರತಾಲ್ಲೂಕು, ರಾಮನಗರಜಿಲ್ಲೆ. |
9972677707 |
11 |
ಲೈಫ್‌ಟ್ರೀನೇಚರ್ ಕ್ಯಾಂಪ್ |
ಹನುಮನಹಳ್ಳಿಗ್ರಾಮ, ಕಸಬಾಹೋಬಳಿ, ಕನಕಪುರತಾಲ್ಲೂಕು, ರಾಮನಗರಜಿಲ್ಲೆ. |
9663585591 |
12 |
ಕಾಡಗಲ್ ರೆಸಾರ್ಟ್ |
ಕೆರಳಾಳುಸಂದ್ರಗ್ರಾಮ, ಕಸಬಾ ಹೋಬಳಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ. |
9739300393 |