ಮುಚ್ಚಿ

ಸಾಹಸ

ರಾಮದೇವರಬೆಟ್ಟ

Trekking in Ramadevara Betta


ರಾಮನಗರ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಶ್ರೀ ರಾಮದೇವರ ಬೆಟ್ಟವು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಿನಾಯಕ ನಗರದ ವೃತ್ತದಲ್ಲಿ ಬಲಗಡೆಗೆ ತಿರುಗಿ ಸುಮಾರು 3 ಕಿ.ಮೀ. ಕ್ರಮಿಸಿದರೆ ಐತಿಹಾಸಿಕ ಮತ್ತು ಪುರಾಣ ಪ್ರಸಿದ್ಧ ರಾಮದೇವರ ಬೆಟ್ಟ ಸಿಗುತ್ತದೆ. ಇದನ್ನು ರಾಮದುರ್ಗ, ರಾಮಗಿರಿ, ಶಿವರಾಮಗಿರಿ, ಕಪೋತಗರಿ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ರಾಮದೇವರಬೆಟ್ಟ ಪ್ರವಾಸಿಗರಿಗೆ, ಸಾಹಸ ಪ್ರವಾಸಿಗರಿಗೆ, ಚಾರಣರಿಗೆ ಹಾಗೂ ಭಕ್ತರಿಗೆ ಅತ್ಯಂತ ಪ್ರಿಯವಾದ ತಾಣವಾಗಿದೆ. ಬೆಟ್ಟವನ್ನು ಹತ್ತಲು ಅನುಕೂಲವಾಗುವಂತೆ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಬೆಟ್ಟದ ತುದಿಯಲ್ಲಿ ಶಿವನ ಮತ್ತು ರಾಮನ ದೇವಸ್ಥಾನಗಳಿವೆ. ಇಲ್ಲಿರುವ ಸೊಣೆಯಲ್ಲಿ ಸದಾ ನೀರಿನಿಂದ ಕಂಗೊಳಿಸುತ್ತಿದೆ. ಅತ್ಯಂತ ಅಪರೂಪ ಎನಿಸುವ ರಣಹದ್ದುಗಳು ಈ ಬೆಟ್ಟದಲ್ಲಿ ವಾಸವಾಗಿದ್ದು ಅರಣ್ಯ ಇಲಾಖೆಯಿಂದ ಇವುಗಳ ಸಂರಕ್ಷಣೆ ಹಾಗೂ ಪ್ರವಾಸಿಗರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಹಿಂದಿ ಚಲನಚಿತ್ರವಾದ ಶೋಲೆ ಚಿತ್ರದ ಸಂಪೂರ್ಣ ಚಿತ್ರೀಕರಣ ನಡೆದ ಪ್ರಸಿದ್ದ ಸ್ಥಳವಾಗಿದೆ.





ಸಾವನದುರ್ಗ ಬೆಟ್ಟ

Savanadurga Hill


ರಾಮನಗರದಿಂದ 30 ಕಿ.ಮೀ ದೂರದಲ್ಲಿ ಸಾವನ ದುರ್ಗಾ ಬೆಂಗಳೂರಿನ ಒಂಬತ್ತು ಕೋಟೆಗಳಲ್ಲಿ ಒಂದಾಗಿದೆ. ಇದು ಬೆಂಗಳೂರಿನಿಂದ 50 ಕಿ.ಮೀ ದೂರದಲ್ಲಿದೆ. ಇದು ಏಷ್ಯಾದಲ್ಲಿ ಅತಿ ದೊಡ್ಡ ಏಕಶಿಲೆಯಾಗಿದೆ. ಎತ್ತರ ಹೆಚ್ಚಳ 1226 ಶ್ರೀಮಂತ ಎತ್ತರವಾಗಿದೆ, ಕಾಲು ಬೆಟ್ಟದಲ್ಲಿ ಅದೇ ಹೆಸರಿನ ಹಳ್ಳಿ ಇದೆ ಮತ್ತು ಔಷಧೀಯ ಮೂಲಿಕೆಗಳ ಗಾರ್ಡನ್ ರಕ್ಷಿಸಲಾಗಿದೆ. ಈ ಉದ್ಯಾನವನವು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ, ಉತ್ತಮ ರಸ್ತೆ ಮತ್ತು ಮೂಲ ಸೌಕರ್ಯಗಳು ಲಭ್ಯವಿದೆ.






ಶ್ರೀ ರೇವಣ್ಣ ಸಿದ್ದೇಶ್ವರ ಬೆಟ್ಟ

Revana Siddeshwara Hill


ರಾಮನಗರದಿಂದ ಕನಕಪುರ ಕಡೆಗೆ ಹೋಗುವ ರಸ್ತೆಯಲ್ಲಿ 15 ಕಿ.ಮೀ. ದೂರ ಕ್ರಮಿಸಿದರೆ ಪವಿತ್ರ ಯಾತ್ರಾಸ್ಥಳ ರೇವಣ್ಣ ಸಿದ್ದೇಶ್ವರನ ಬೆಟ್ಟ ಸಿಗುತ್ತದೆ. ರೇವಣ್ಣ ಸಿದ್ದೇಶ್ವರ ಬೆಟ್ಟವು ಅನೇಕ ವಿಶಿಷ್ಟತೆಗಳಿಂದ ಕೂಡಿದೆ. ಏಕಶಿಲಾ ಗಿರಿಯಾದ ಇದು ಅತ್ಯಂತ ಕಡಿದಾಗಿದ್ದರೂ ಏರುವುದಕ್ಕೆ ಮೆಟ್ಟಿಲುಗಳಿವೆ. ಭಕ್ತಿ ಮತ್ತು ಸಾಹಸ ಎರಡೂ ಏಕೀಭವಿಸುವುದರಿಂದ ಬೆಟ್ಟ ಹತ್ತುವುದು ವಿಶಿಷ್ಟವಾದ ಅನುಭವವನ್ನು ನೀಡುತ್ತದೆ. ಬೆಟ್ಟದ ತಪ್ಪಲನ್ನು ಸಮೀಪಿಸುತ್ತಿದ್ದಂತೆಯೇ ಸುಂದರ ಉದ್ಯಾನವನದ ನಡುವೆ ರೇವಣ್ಣ ಸಿದ್ದೇಶ್ವರನ ತಂಗಿಯಾದ ರೇಣುಕಾಂಬೆಯ ದೇವಾಲಯವಿದೆ. ನಿತ್ಯ ದಾಸೋಹ ಮಾಡುತ್ತಿರುವ ಭೋಜನಶಾಲೆ, ಸರ್ಕಾರಿ ಅತಿಥಿ ಗೃಹ, ಛತ್ರಗಳು, ಕಲ್ಯಾಣ ಮಂಟಪ ಹಾಗೂ ನೂರು ವರ್ಷಗಳಷ್ಟು ಹಳೆಯದಾದ ಮೂಲ ಮಠಗಳು ಇಲ್ಲಿವೆ. ಬೆಟ್ಟವನ್ನು ಹತ್ತಲು ಮೆಟ್ಟಿಲುಗಳಿವೆ. ಬೆಟ್ಟದ ತುದಿಯಲ್ಲಿ ರುದ್ರಮುನೇಶ್ವರನ ಮತ್ತು ಸಿದ್ಧರಾಮೇಶ್ವರನ ಎರಡು ಗೋಪುರಗಳಿವೆ. ಬೆಟ್ಟದ ಮುಂದುಗಡೆಯಿಂದ ಕೆಳಕ್ಕೆ ಇಳಿದರೆ ರೇವಣ್ಣ ಸಿದ್ದೇಶ್ವರನು ತಪಸ್ಸು ಮಾಡಿದ ಗುಹೆ, ರೇವಣ್ಣಸಿದ್ದೇಶ್ವರನ ಲಿಂಗಮೂರ್ತಿ, ಎಡಬಲಕ್ಕೆ ಬಸವನ ವಿಗ್ರಹಗಳು ಹಾಗೂ ಕೊಳವನ್ನು ಕಾಣಬಹುದು. ಪ್ರತಿವರ್ಷ ಮೇ ತಿಂಗಳ ವ್ಯಾಸಹುಣ್ಣಿಮೆಯ ಸಂದರ್ಭದಲ್ಲಿ 5 ದಿನಗಳ ಕಾಲ ಜಾತ್ರೆ, ಅಗ್ನಿಕುಂಡ ಮುಂತಾದ ದೇವರಕಾರ್ಯಗಳು ಜರುಗುತ್ತವೆ. ಸಾವಿರಾರು ಭಕ್ತಾಧಿಗಳು ನಾಡಿನ ಮೂಲಮೂಲೆಗಳಿಂದ ಬಂದು ಸೇರುತ್ತಾರೆ.