ಮುಚ್ಚಿ

ಸ್ಥಾಯಿ ಸಮಿತಿ

ಸ್ಥಾಯಿ ಸಮಿತಿ ಹೆಸರುಗಳು

    • ಸಾಮಾನ್ಯ ಸ್ಥಾಯಿ ಸಮಿತಿ
    • ಹಣಕಾಸು ಮತ್ತು ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿ
    • ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ
    • ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ
    • ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ

 ಸಾಮಾನ್ಯ ಸ್ಥಾಯಿ ಸಮಿತಿ :

 ಉಪಾಧ್ಯಕ್ಷರು ಪದನಿಮಿತ್ತ ಸದಸ್ಯರು ಹಾಗೂ ಸದರಿ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಸಾಮಾನ್ಯ ಸ್ಥಾಯಿ ಸಮಿತಿಯು ಸಿಬ್ಬಂದಿ ವಿಷಯಗಳಿಗೆ ಸಮಬಂಧಪಟ್ಟ ಕಾರ್ಯಗಳನ್ನು ಮತ್ತು ಸಂಪರ್ಕ, ಕಟ್ಟಡಗಳು,   ಗ್ರಾಮೀಣ ಗೃಹ ನಿರ್ಮಾಣ, ಗ್ರಾಮ ವಿಸ್ತರಣೆ, ಪ್ರಕೃತಿ ವಿಕೋಪಗಳಿಗಾಗಿ  ಪರಿಹಾರ ಹಾಗೂ ಸಂಬಂಧಪಟ್ಟ ವಿಷಯಗಳ ಮತ್ತು ಉಳಿದ ಜಿಲ್ಲಾ ಸಂಕೀರ್ಣ ವಿಷಯಗಳಿಗೆ ಸಂಬಂಧಪಟ್ಟ ಕಾರ್ಯಗಳನ್ನು   ನೆರವೇರಿಸತಕ್ಕದ್ದು.

ಕ್ರ.ಸಂ. ಹೆಸರು ವಿವರ
1 ಶ್ರೀಮತಿ. ಸಿ.ವಿ. ಉಷಾರವಿ ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತುಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು 
2 ಶ್ರೀಮತಿ. ಎನ್. ಸುಗುಣ ಸದಸ್ಯರು
3 ಶ್ರೀಮತಿ. ಎಸ್.ನಾಗರತ್ನ ಶಿವಣ್ಣ ಸದಸ್ಯರು

 ಹಣಕಾಸು ಮತ್ತು ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿ :

 1.  ಅಧ್ಯಕ್ಷರು ಪದನಿಮಿತ್ತ ಸದಸ್ಯ ಹಾಗೂ ಸದರಿ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಪಂಚಾಯತಿಯ ಹಣಕಾಸು ಬಜೆಟ್ ರೂಪಿಸುವುದು, ಆದಾಯ ಹಚ್ಚಿಸುವುದಕ್ಕಾಗಿ ಪ್ರಸ್ತಾವನೆಗಳ  ಪರಿಶೀಲನೆ ಮತ್ತು ಜಮೆ   ಹಾಗೂ ಖರ್ಚುಗಳ ವಿವರ ಪತ್ರಗಳ ಪರಿಶೀಲನೆ ಜಿಲ್ಲಾ ಪಂಚಾಯಿತಿತಿಯ ಹಣಕಾಸಿನ ಮೇಲೆ ಪ್ರಭಾರವನ್ನು ಬೀರುವ ಎಲ್ಲಾ ಪ್ರಸ್ತಾವನೆಗಳ ಪರ್ಯಾಲೋಚನೆ ಮತ್ತು ಜಿಲ್ಲಾ ಪಂಚಾಯಿತಿಯ ಅದಾಯ ಮತ್ತು   ವೆಚ್ಚದ ಸಾಮಾನ್ಯ ಮೇಲ್ವಿಚಾರಣೆಗಳಿಗೆ ಸಂಬಂಧಪಟ್ಟ;
 2.  ಯೋಜನಾ ಅದ್ಯತೆಗಳು ಅಭಿವೃದ್ಧಿಗಳಿಗೆ ತಗಲುವ ವೆಚ್ಚಗಳನ್ನು ನಿಗದಿಪಡಿಸುವುದು ಸಂಬಂಧಪಟ್ಟ ಹಾರಿಜೆಂಟಲ್  ಮತ್ತು ವರ್ಟಿಕಲ್ ಲಿಂಕೇಜ್ ಸರ್ಕಾರವು ಕೊಟ್ಟ ಮಾರ್ಗದರ್ಶನಗಳನ್ನು ಕಾರ್ಯಗತ   ಮಾಡುವುದು. ಯೋಜಿತ ಕಾರ್ಯಕ್ರಮಗಳ ನಿಯಮಿತ ಪುನರಾವಲೋಕನ ಮುಖ್ಯ ಕಾರ್ಯಕ್ರಮಗಳ  ಮೌಲ್ಯ ನಿರ್ಣಯ ಮತ್ತು ಸಣ್ಣ ಉಳಿತಾಯ   ಯೋಜನೆಗಳಿಗೆ ಸಂಬಂಧಪಟ್ಟಿರುತ್ತದೆ.

ಕ್ರ.ಸಂ. ಹೆಸರು ವಿವರ
1 ಶ್ರೀ ಹೆಚ್. ಬಸಪ್ಪ ಮಾನ್ಯ ಅಧ್ಯಕ್ಷರು,ರಾಮನಗರ ಜಿಲ್ಲಾ ಪಂಚಾಯತ್
2 ಶ್ರೀ ಎಸ್ ಗಂಗಾಧರ್ ಸದಸ್ಯರು
3 ಶ್ರೀ ಸಿ ಪಿ ರಾಜೇಶ್ ಸದಸ್ಯರು
4 ಶ್ರೀಮತಿ. ಸಿ.ವಿ. ಉಷಾರವಿ ಸದಸ್ಯರು

 ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ :

 ಈ ಸಮಿತಿಯು ತಮ್ಮ ಸದಸ್ಯರಲ್ಲೇರು ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವರು  ಜಿಲ್ಲಾ ಪಂಚಾಯತಿಯ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳ ಹೊಣೆಗಾರಿಕೆ ಹೊಂದಿರುವುದು.ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು   ರಾಷ್ಟ್ರೀಯ ಮತ್ತು ರಾಜ್ಯ ಯೋಜನೆಗಳ ಚೌಕಟ್ಟಿನೊಳಗೆ ಜಿಲ್ಲೆಯಲ್ಲಿ ಶಿಕ್ಷಣ ಯೋಜನೆಯನ್ನು ಕೈಗೊಳ್ಳುವುದು.ಜಿಲ್ಲಾ ಪಂಚಾಯತಿಯ ಶೈಕ್ಷಣಿಕ ಚಟುವಟಿಕೆಗಳ ಸಮೀಕ್ಷೆ ಮತ್ತು ಮೌಲ್ಯ ನಿರ್ಣಯ   ಮಾಡುವುದು.ಜಿಲ್ಲಾ ಪಂಚಾಯತಿಯು ತನಗೆ ವಹಿಸಿಕೊಡಬಹುದಾದ ಶಿಕ್ಷಣ ವಯಸ್ಕರ ಸಾಕ್ಷರತೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಬಂಧಪಟ್ಟ ಇತರೆ ಕರ್ತವ್ಯಗಳನ್ನು ನೆರವೇರಿಸತಕ್ಕದ್ದು. ಆರೋಗ್ಯ   ಸೇವೆಗಳ, ಆಸ್ಪತ್ರೆಗಳು, ನೀರು ಸರಬಾರಜು ಕುಟುಂಬ ಕಲ್ಯಾಣ ಮತ್ತು ಇತರೆ ವಿಷಯಗಳಿಗೆ ಸಂಬಂಧಪಟ್ಟ ಕಾರ್ಯಗಳನ್ನು ನೆರವೇರಿಸತಕ್ಕದ್ದು.

ಕ್ರ.ಸಂ. ಹೆಸರು ವಿವರ
1 ಶ್ರೀ ಶಂಕರ್

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತುಜಿಲ್ಲಾ ಪಂಚಾಯತ್ ಸದಸ್ಯರು

2 ಶ್ರೀ ಹೆಚ್.ಕೆ. ನಾಗರಾಜು ಸದಸ್ಯರು
3 ಶ್ರೀ ಎಂ. ಎನ್ ಮಂಜುನಾಥ್ ಸದಸ್ಯರು
4 ಶ್ರೀಮತಿ. ಎನ್. ಸುಗುಣ ಸದಸ್ಯರು
5 ಶ್ರೀಮತಿ ಡಿ.ಎಚ್. ಜಯರತ್ನ ಸದಸ್ಯರು
6 ಶ್ರೀಮತಿ ಬಿ.ಎನ್. ದಿವ್ಯಾ ಗಂಗಾಧರ್ ಸದಸ್ಯರು

 ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ :

ಈ ಸಮಿತಿಯು ತಮ್ಮ ಸದಸ್ಯರಲ್ಲೇರು ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವರು 
1.  ಕೃಷಿ ಉತ್ಪಾದನೆ ಪಶು ಸಂಗೋಪನೆ ಸಹಕಾರ ಬದು ಕಟ್ಟುವುದು ಮತ್ತು ಭೂವಿಯನ್ನು ಕೃಷಿಯೋಗ್ಯ ಮಾಡುವುದು.
2.  ಗ್ರಾಮ ಹಾಗೂ ಗುಡಿ ಕೈಗಾರಿಕೆಗಳು
3.  ಜಿಲ್ಲಾ ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುವುದು.

ಕ್ರ.ಸಂ. ಹೆಸರು ವಿವರ
1 ಶ್ರೀಮತಿ ನಾಗರತ್ನ ಚಂದ್ರೇಗೌಡ

ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತುಜಿಲ್ಲಾ ಪಂಚಾಯತ್ ಸದಸ್ಯರು

2 ಶ್ರೀಮತಿ ಭಾಗ್ಯ ಸದಸ್ಯರು
3 ಶ್ರೀಮತಿ ನಾಜಿಯಾ ಖಾನಂ ಸದಸ್ಯರು
4 ಶ್ರೀಮತಿ ಬಿ.ಎನ್. ದಿವ್ಯಾ ಗಂಗಾಧರ್ ಸದಸ್ಯರು
5 ಶ್ರೀ ಶಿವಕುಮಾರ್ ಸದಸ್ಯರು
6 ಶ್ರೀಮತಿ ಎಸ್.ನಾಗರತ್ನ ಶಿವಣ್ಣ ಸದಸ್ಯರು