ಮುಚ್ಚಿ

ಆಡಳಿತಾತ್ಮಕ ವ್ಯವಸ್ಥೆ

ಆಡಳಿತ ಶಾಖೆಯು:

ಖಾಲಿಹುದ್ದೆಗಳು, ನೇಮಕಾತಿ, ಸಂಬಳ ಸಾರಿಗೆಗಳು, ವರ್ಗಾವಣೆ ಮತ್ತು ಪದೋನ್ನತಿ, ಸ್ಥಳ ನಿಯುಕ್ತಿ, ನಿವೃತ್ತಿಗಳು, ಇಲಾಖಾವಿಚಾರಣೆಗಳು (ಸಿಸಿಎ), ವೈಯಕ್ತಿಕ ಠೇವಣಿ ಲೆಕ್ಕಪತ್ರಗಳು, ಆಡಿಟ್ ವರದಿಗಳು, ಜಿಲ್ಲಾಧಿಕಾರಿಗಳ ದಿನಚರಿ ಮತ್ತು ವ್ಯವಹಾರ ಅಂಕಿಅಂಶಗಳು ಇವುಗಳನ್ನು ನಿರ್ವಹಿಸುತ್ತದೆ.

ಕಂದಾಯ ಶಾಖೆ:

ಈ ಶಾಖೆಯು ಜಮಾಬಂದಿ, ಬೇಡಿಕೆ, ಸಂಗ್ರಹ ಮತ್ತು ಬಾಕಿ, ಭೂಮಂಜೂರಾತಿ, ಭೂಸ್ವಾಧೀನ, ಭೂ ಅನ್ಯಸಂಕ್ರಮಣ, ಪಿಟಿಸಿಎಲ್, ಮೇಲ್ಮನವಿಗಳು, ಭೂಸುಧಾರಣಾ ಪ್ರಕರಣಗಳು, ಗಣಿ ಮತ್ತು ಖನಿಜಗಳು, ಮತ್ತು ಒತ್ತುವರಿಯನ್ನು ಸಕ್ರಮಗೊಳಿಸುವುದು, ಇತರೆ ಕಾರ್ಯಗಳನ್ನು ನಿರ್ವಹಿಸುತ್ತದೆ.

ಚುನಾವಣಾ ಶಾಖೆ:

ಈ ಶಾಖೆಯು ಲೋಕಸಭಾ, ವಿಧಾನಸಭಾ, ವಿಧಾನಪರಿಷತ್, ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಅಂದರೆ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಪುರಸಭೆಗಳು, ವ್ಯವಸಾಯೋತ್ಪನ್ನ ಮಾರಾಟ ಸಂಘಗಳು, ಮತ್ತಿತರ ಸಹಕಾರಿ ಸಂಸ್ಥೆಗಳ ಚುನಾವಣಾ ವ್ಯವಹರಣೆಯ ಕಾರ್ಯಗಳನ್ನು ನಿರ್ವಹಿಸುತ್ತದೆ.

ಪುರಸಭಾ ಶಾಖೆ:

ಈ ಶಾಖೆಯು ಪುರಸಭೆಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು, ಸೇವಾ ವಿಷಯಗಳು, ಸ್ವರ್ಣ ಜಯಂತಿ ಸಹಕಾರಿ ರೋಜ್ ಗಾರ್ ಯೋಜನೆ (SJSRY), ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಸಮಗ್ರ ಅಭಿವೃದ್ಧಿ (IDSMT), ನೀರು ಸರಬರಾಜು ಯೋಜನೆಗಳು, ವಸತಿ ಯೋಜನೆಗಳು, ಮತ್ತು ಕೊಳಚೆ ಪ್ರದೇಶಗಳ ಅಭಿವೃದ್ಧಿ ಇಂತಹ ನಾನಾ ಬಗೆಯ ಯೋಜನೆಗಳ ಪ್ರಗತಿ ಇವುಗಳನ್ನು ನಿರ್ವಹಿಸುತ್ತದೆ.

ಧಾರ್ಮಿಕ ದತ್ತಿ ಇಲಾಖೆ:

ಈ ಶಾಖೆಯು ಧಾರ್ಮಿಕದತ್ತಿ ದೇವಸ್ಥಾನಗಳ ನಿರ್ಮಾಣ, ಪುನರ್ನಿರ್ಮಾಣ, ಧರ್ಮದರ್ಶಿಗಳ ನೇಮಕಾತಿ ಮತ್ತು ಅರ್ಚಕರಿಗೆ ಸಂಭಾವನೆ/ವರ್ಷಾಶನ, ಆರಾಧನ ಯೋಜನೆ ಇತ್ಯಾದಿಗಳನ್ನು ನಿರ್ವಹಿಸುತ್ತದೆ.

ಜನಗಣತಿ ಶಾಖೆ:

ಈ ಶಾಖೆಯು ಜನಗಣತಿ ವಿಷಯಗಳನ್ನು ನಿರ್ವಹಿಸುತ್ತದೆ.

ನ್ಯಾಯಾಂಗ ಶಾಖೆ:

ಈ ಶಾಖೆಯು ಶಾಂತಿ ಮತ್ತು ಸುವ್ಯವಸ್ಥೆ (ಕಲಂ 144 ಇತ್ಯಾದಿಗಳು) ಮತ್ತು ಆಯುಧಗಳು, ಮದ್ದುಗುಂಡುಗಳು, ಸಿನಿಮಾ ಇವುಗಳಿಗೆ ಸಂಬಂಧಿಸಿದಂತೆ ಪರವಾನಗಿ ಕೊಡುವ ವಿಷಯಗಳನ್ನು ನಿರ್ವಹಿಸುತ್ತದೆ.

ಇತರೆ ಕಾರ್ಯಗಳ ಶಾಖೆ

ಈ ಶಾಖೆಯು NSAP, OAP, PHP, MPLAD ಮತ್ತು ಇತರೆ ಯೋಜನೆಗಳನ್ನು ನೋಡಿಕೊಳ್ಳುತ್ತದೆ.  ಇದು ಸಭೆಗಳ ಅಂಕಿ ಅಂಶಗಳು, ಲೋಕೋಪಯೋಗಿ ಕೆಲಸಗಳು, ಆದಾಯ ಮತ್ತು ಜಾತಿ ಪ್ರಮಾಣಪತ್ರಗಳನ್ನು ಕೊಡುವುದು, ಮನೆಬಾಡಿಗೆ ನಿಯಂತ್ರಣ, ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ಇನ್ನಿತರೆ ಎಲ್ಲ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತದೆ.