ಮುಚ್ಚಿ

ದೇವಾಲಯಗಳು

ಮಾಗಡಿ ರಂಗನಾಥಸ್ವಾಮಿ ದೇವಸ್ಥಾನ

ತಿರುಮಲ,ಮಾಗಡಿ

 

ರಾಮನಗರದಿಂದ 36 ಕಿ.ಮೀ. ದೂರದಲ್ಲಿರುವ ಮಾಗಡಿ ಪಟ್ಟಣದಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯವು ಚೋಳರ ಕಾಲದ ಪ್ರಸಿದ್ಧ ದೇವಾಲಯವಾಗಿದ್ದು, ಶ್ರೀ ರಂಗನಾಥಸ್ವಾಮಿ ವಿಗ್ರಹದÀ ಮುಖ ಪಶ್ಚಿಮ ದಿಕ್ಕಿನಲ್ಲಿದ್ದು, ಉಳಿದ ಎಲ್ಲಾ ವಿಗ್ರಹಗಳ ಪ್ರತಿಮೆಗಳ ಮುಖ ಪೂರ್ವದಿಕ್ಕಿಗಿವೆ. ದೇವಾಲಯದ ಮುಂಭಾಗದಲ್ಲಿ ಪುರಾತನ ಕಾಲದ ಪುಷ್ಕರಣಿ ಇದೆ. ನಿತ್ಯ ದಾಸೋಹವಿರುವ ಈ ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳು ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

 

ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನ

ಆಂಜನೇಯ ದೇವಸ್ಥಾನ, ಕೆಂಗಲ್

 

ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನ: ಬೆಂಗಳೂರು-ಮೈಸೂರು ರಸ್ತೆಯಲ್ಲಿ ರಾಮನಗರದಿಂದ 10 ಕಿ.ಮೀ. ದೂರದಲ್ಲಿರುವ ಕೆಂಗಲ್ ಆಂಜುನೇಯ ದೇವಾಲಯ ಪ್ರಕೃತಿ ನಿರ್ಮಿತ ಕೆಂಪು ಶಿಲೆಯಲ್ಲಿರುತ್ತದೆ. ಪ್ರತಿ ಶನಿವಾರ ಧಾರ್ಮಿಕ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳವಾಗಿದ್ದು, ಪ್ರವಾಸಿಗರಿಗಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಕೆಂಗಲ್ ಹನುಮಂತಯ್ಯನವರು ನಿರ್ಮಿಸಿದ ಈ ದೇವಾಲಯವು ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದ್ದು ಹೆಚ್ಚಿನ ಸಂಖ್ಯೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

 

 

 

Kabbalammaಶ್ರೀ.ಕಬ್ಬಾಳಮ್ಮ ದೇವಾಲಯ

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿರುವ ಶ್ರೀ. ಕಬ್ಬಾಳಮ್ಮ ದೇವಾಲಯವು ಐತಿಹಾಸಿಕ ಮಹತ್ವವನ್ನು ಹೊಂದಿರುವ ಧಾರ್ಮಿಕ ಪ್ರವಾಸಿ ಕ್ಷೇತ್ರ. ಈ ದೇವಾಲಯಕ್ಕೆ ಕೇವಲ ರಾಜ್ಯದ ಪ್ರವಾಸಿಗರಲ್ಲದೆ ಹೊರ ರಾಜ್ಯಗಳಿದಲೂ ಪ್ರವಾಸಿಗರು ಬೇಟಿನೀಡುತ್ತಾರೆ. ರಾಜ್ಯ ರಾಜ ಧಾನಿಯಿಂದ 80 ಕಿ.ಮೀದೂರದಲ್ಲಿರುವ ಈ ದೇವಾಲಯ ಬೆಂಗಳೂರು-ಮೈಸೂರು ರಸ್ತೆಯ ಚನ್ನಪಟ್ಟಣದಿಂದ  28 ಕಿ.ಮೀ ದೂರದಲ್ಲಿದೆ. ಕಬ್ಬಾಳಮ್ಮನು ಪ್ರಕೃತಿಯ ಮಡಿಲಿನಲ್ಲಿ ಬೆಟ್ಟಗುಡ್ಡಗಳ ಮಧ್ಯದಲ್ಲಿ, ಕೆರೆತೊರೆಗಳ ನಡುವೆ ನೆಲೆಸಿ ಭಕ್ತರ ಇಷ್ಟಾರ್ಥ ಈಡೇರಿಸುತ್ತಿದ್ದಾಳೆ. ಶಕ್ತಿ ದೇವತೆಯ ತಾಣವಾದ ಈದೇವಾಲಯಕ್ಕೆ ಸುಮಾರು 200 ವರ್ಷಗಳ ಇತಿಹಾಸವಿದೆ. ಈ ದೇವಿಯ ಮೂಲ ನೆಲೆ ತಮಿಳುನಾಡು ರಾಜ್ಯ. ಈ ತಾಯಿಯು ತನ್ನ ಪರಿವಾರದ ದೇವರುಗಳೊಂದಿಗೆ ಲೋಕಸಂಚಾರಕ್ಕಾಗಿ ಬಂದಾಗ ಕಬ್ಬಾಳು ಊರಿನ ಬಳಿಮಳೆಯು ಸುರಿಯಲಾರಂಭಿಸುತ್ತದೆ. ಈ ಸಂದರ್ಭದಲ್ಲಿ ಅಡಿಕೆ ತೋಟ ಒಂದರಲ್ಲಿ ನೆಲೆಸುತ್ತಾಳೆ. ನಂತರ ಊರಿನ ಗ್ರಾಮದೇವತೆಗಳ ಆಶ್ರಯ ಪಡೆದು ಅದೇ ಸ್ಥಳದಲ್ಲಿ ಶಾಶ್ವತವಾಗಿ ನೆಲೆನಿಲ್ಲುತ್ತಾಳೆ. ದೇವಿಯು ಕಬ್ಬಾಳು ಎಂಬ ಗ್ರಾಮದಲ್ಲಿ ನೆಲೆ ನಿಂತಿರುವುದರಿಂದ ಇಂದಿಗೂ ಕಬ್ಬಾಳಮ್ಮಎಂದೇ ಪ್ರಸಿದ್ಧಿಯಾಗಿದ್ದಾಳೆ.