ಮುಚ್ಚಿ

ಕೃಷಿ ಇಲಾಖೆ

ಇಲಾಖೆಯ ಪರಿಚಯ:

                    1946 ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಅಂಗವಾದ ಮೈಸೂರು ಕೃಷಿ ಕಾಲೇಜಿನಲ್ಲಿ ಬಿ.ಎಸ್ಸಿ ಕೃಷಿ ಪದವಿ ಕಾರ್ಯಕ್ರಮ ಪ್ರಾರಂಭಗೊಂಡಿತು. 1956 ಮತ್ತು ಅದರ ಹಿಂದೆ ಕೃಷಿ ವಿಸ್ತರಣೆ, ಶಿಕ್ಷಣ ಮತ್ತು ಸಂಶೋಧನೆಯ ಅಂಗಗಳೆಲ್ಲವೂ ಕೃಷಿ ಇಲಾಖೆಯ ವ್ಯಾಪ್ತಿಗೊಳಪಟ್ಟಿದ್ದವು. ಅಲ್ಲದೆ, ಕೃಷಿ ಇಲಾಖೆಯು ಕೃಷಿ ಬೆಳೆಗಳೊಂದಿಗೆ, ತೋಟಗಾರಿಕೆ ಮತ್ತು ಪ್ಲಾಂಟೇಶನ್ ಬೆಳೆಗಳ ಬಗ್ಗೆಯೂ ಚಟುವಟಿಕೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿತ್ತು. 1963ರಲ್ಲಿ ರಾಜ್ಯ ಸರ್ಕಾರವು ಕೃಷಿ ಇಲಾಖೆಯ ಅಧೀನಕ್ಕೊಳಪಟ್ಟಿದ್ದ ಎಲ್ಲಾ ತೋಟಗಾರಿಕೆ ಮತ್ತು ಪ್ಲಾಂಟೇಶನ್ ಬೆಳೆಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಮತ್ತು ಸಂಶೋಧನಾ ಕೇಂದ್ರಗಳನ್ನು ಕೃಷಿ ಇಲಾಖೆಯಿಂದ ಬೇರ್ಪಡಿಸಿ ಹೊಸದಾಗಿ ಸ್ಥಾಪಿಸಲಾದ ತೋಟಗಾರಿಕೆ ಇಲಾಖೆಗೆ ವಹಿಸಿತು. ಹೀಗೆ ಕೃಷಿ ಇಲಾಖೆಯು ಕೃಷಿ ಬೆಳೆಗಳಾದ:- ಏಕದಳ, ದ್ವಿದಳ ಧಾನ್ಯಗಳು, ಎಣ್ಣೆಕಾಳು, ಹತ್ತಿ, ಕಬ್ಬು ಮತ್ತು ತಂಬಾಕು ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ಮತ್ತು ಕೃಷಿ ಶಿಕ್ಷಣ ಹಾಗೂ ಸಂಶೋಧನೇ ಕಾರ್ಯಗಳನ್ನು ಉಳಿಸಿಕೊಂಡಿತು. ಆದರೆ, 1965ರಲ್ಲಿ ಕೃಷಿ ವಿಶ್ವವಿದ್ಯಾನಿಲಯವು ಸ್ಥಾಪಿತಗೊಂಡು ಎಲ್ಲಾ ಕೃಷಿ ಸಂಶೋಧನೆ ಯೋಜನೆ ಕಾರ್ಯಕ್ರಮಗಳನ್ನು ಹಾಗೂ ಕೃಷಿ ಕಾಲೇಜುಗಳನ್ನು ವಿಶ್ವವಿದ್ಯಾನಿಲಯಕ್ಕೆ ಹಸ್ತಾಂತರಿಸಲಾಯಿತು. ಹೀಗೆ 1965ರಲ್ಲಿ ಕೃಷಿ ಇಲಾಖೆಯಡಿ ಕೃಷಿ ವಿಸ್ತರಣೆ, ರೈತರ ತರಬೇತಿ, ಕೃಷಿ ಪರಿಕರ  ಸರಬರಾಜು ಮತ್ತು ಸೇವೆ ಮಾತ್ರಕ್ಕಾಗಿ ಸೀಮಿತಗೊಂಡಿತು.

 

ಉದ್ದೇಶಗಳು ಮತ್ತು ದೃಷ್ಟಿ:

                      ರೈತರ ಬೇಡಿಕೆ, ಜನರ ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿನ ಬದಲಾವಣೆಗನುಗುಣವಾಗಿ, ಕಾಲಾನುಕಾಲಕ್ಕೆ, ನೂತನ ಯೋಜನೆಗಳನ್ನು ಹೊರತಂದು, ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು.

 

ಕಾರ್ಯಕ್ರಮಗಳು ಮತ್ತು ಯೋಜನೆ:

 1.ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣೆ: ಬೆಳೆಯ ತಿಳುವರಿ ಹೆಚ್ಚಿಸಲು ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಅವಶ್ಯವಾಗಿದ್ದು, ಅದರಂತೆ 2019-20ನೇ ಸಾಲಿನಲ್ಲಿ 1929 ಕ್ವಿಂಟಾಲ್ ವಿವಿಧ ಬೆಳೆಗಳ ದೃಢೀಕೃತ ಬಿತ್ತನೆ ಬೀಜಗಳನ್ನು ಜಿಲ್ಲೆಯ 18 ರೈತ ಸಂಪರ್ಕ ಕೇಂದ್ರಗಳ ಮುಖಾಂತರ 13888 ರೈತರಿಗೆ 33.46 ಲಕ್ಷ ಸಹಾಯಧನದಲ್ಲಿ ವಿತರಣೆ ಮಾಡಲಾಗಿದೆ.

  2.ಕೃಷಿ ಯಾಂತ್ರೀಕರಣ ಯೋಜನೆ: ಕೃಷಿಯಲ್ಲಿ ಕೃಷಿ ಕಾರ್ಮಿಕರ ಕೊರತೆ ನೀಗಿಸಿ ಉತ್ಪಾದನಾ ವೆಚ್ಚ ಕಡಿಮೆಗೊಳಿಸುವ ಸಲುವಾಗಿ ರೈತರಿಗೆ ಸಹಾಯಧನದಲ್ಲಿ ಆಧುನಿಕ ಕೃಷಿ ಯಂತ್ರೋಪಕರಣಗಳನ್ನುಇಲಾಖೆ ನಿಗಧಿಪಡಿಸಿದ ಸಹಾಯಧನದಲ್ಲಿ ವಿತರಣೆ ಮಾಡಲಾಗುತ್ತದೆ. 2019-20 ನೇ ವರ್ಷದಲ್ಲಿ ರೂ.640.4 ಲಕ್ಷಗಳ ವೆಚ್ಚಭರಿಸಿ, ಒಟ್ಟು 1771 ರೈತರಿಗೆ ವಿವಿಧ ಬಗೆಯ ಕೃಷಿ ಯಂತ್ರೋಪಕರಣಗಳನ್ನು ವಿತರಣೆ ಮಾಡಲಾಗಿರುತ್ತದೆ.

  3.ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಸೂಕ್ಷ್ಮ ನೀರಾವರಿ): ನೀರಿನ ಮಿತವ್ಯಯ ಬಳಕೆ ಹಾಗೂ ನೀರು ಪೋಲಾಗುವಿಕೆಯನ್ನು ತಡೆಗಟ್ಟುವ ಸಲುವಾಗಿ ಇಲಾಖಾ ವತಿಯಿಂದ ತುಂತುರು ನೀರಾವರಿ/ಹನಿ ನೀರಾವರಿ ಘಟಕಗಳನ್ನು ಶೇಕಡ 90ರ ಸಹಾಯಧನದಲ್ಲಿ ವಿತರಣೆ ಮಾಡಲಾಗುತ್ತಿದೆ. 2019-20ನೇ ಸಾಲಿನಲ್ಲಿ ರೂ.479.84 ಅನುಗುಣವಾಗಿ ಬಿಡುಗಡೆಯಾಗಿರುವ ಲಕ್ಷಗಳಲ್ಲಿ ಅಕ್ಟೋಬರ್ ಸಹಾಯಧನದಲ್ಲಿ 3118 ರೈತರಿಗೆ ತುಂತುರು ನೀರಾವರಿ ಘಟಕಗಳನ್ನು ವಿತರಣೆ ಮಾಡಲಾಗಿದೆ.

 4.ಕೃಷಿ ಭಾಗ್ಯ: ಮಳೆಯಾಶ್ರಿತ ರೈತರ ಜೀವನ ಮಟ್ಟವನ್ನು ಉತ್ತಮಪಡಿಸಲು ರೈತರ ಕ್ಷೇತ್ರದಲ್ಲಿ ಬೆಳೆಗಳಿಗೆ ಲಭ್ಯವಾದ ನೀರಿನ ಪ್ರಮಾಣವನ್ನು ಮಳೆ ನೀರು ಸಂಗ್ರಹಣೆ ಮುಖಾಂತರ ಹೆಚ್ಚಿಸಿ, ಸುಸ್ತಿರ ಕೃಷಿಯನ್ನಾಗಿ ರೂಪಾಂತರಗೊಳಿಸಲು ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ದತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮಪಡಿಸಲು ಹಾಗೂ ರೈತರ ಆದಾಯವನ್ನು ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. 2019-20ನೇ ಸಾಲಿನಲ್ಲಿ ರೂ.398.17 ಸಹಾಯಧನದಲ್ಲಿ 685 ಕೃಷಿ ಹೊಂಡಗಳನ್ನು ನಿರ್ಮಿಸಲು ಸಹಾಯಧನ ನೀಡಲಾಗಿದೆ. ಹಾಗೂ ಸಹ ಘಟಕಗಳಾದ ಪಾಲಿಥಿನ್ ಲೈನಿಂಗ್, ತುಂತುರು ನೀರಾವರಿ, ಡೀಸಲ್ ಪಂಪ್ ಸೆಟ್ ಗಳಿಗೆ ಸಹಾಯಧನ ನೀಡಲಾಗಿದೆ.

 5.ರಾಷ್ಟ್ರೀಯ ಆಹಾರ ಭದ್ರತಾ ಮಿಷನ್: ದ್ವಿದಳಧಾನ್ಯಗಳ ವಿಸ್ತೀರ್ಣ ಹಾಗೂ ಉತ್ಪಾದಕತೆ ಹೆಚ್ಚಿಸಲು ದ್ವಿದಳಧಾನ್ಯ ಬೆಳೆಗಳಲ್ಲಿ ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡ ರೈತರಿಗೆ ರೂ.9000 ಗಳ ಸಹಾಯಧನವನ್ನು ರೈತನ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮುಖಾಂತರ ವರ್ಗಾವಣೆ ಮಾಡಲಾಗುವುದು. ಅದರಂತೆ ದ್ವಿದಳಧಾನ್ಯ ಬೆಳೆಗಳಾದ ತೊಗರಿಯಲ್ಲಿ ನೂತನ ತಾಂತ್ರಿಕತೆ ಅಳವಡಿಸಿದ 50 ಹೆಕ್ಟೇರ್ ಪ್ರದೇಶದ ರೈತರಿಗೆ ರೂ.4.5 ಲಕ್ಷಗಳ ಹಣವನ್ನು ಡಿ.ಬಿ.ಟಿ ಮುಖಾಂತರ ವರ್ಗಾವಣೆ ಮಾಡಲಾ.ಗಿದೆ
ನ್ಯೂಟ್ರಿ ಸಿರಿಧಾನ್ಯಗಳ ಕಾರ್ಯಕ್ರಮದಡಿ ವಿಸ್ತೀರ್ಣ ಹಾಗೂ ಉತ್ಪಾದಕತೆ ಹೆಚ್ಚಿಸಲು ನ್ಯೂಟ್ರೀ ಸೀರಿಯಲ್ಸ್ ಬೆಳೆಗಳಲ್ಲಿ ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಪ್ರತಿ ರೈತರಿಗೆ ಪ್ರತಿ ಹೆಕ್ಟೇರ್ ಗೆ ರೂ.6000ಗಳ ಸಹಾಯಧನವನ್ನು ರೈತರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮುಖಾಂತರ ವರ್ಗಾವಣೆ ಮಾಡಲಾಗುವುದು. ಅದರಂತೆ ನ್ಯೂಟ್ರಿ ಸಿರಿಧಾನ್ಯಗಳ ಬೆಳೆಗಳಾದ ರಾಗಿ ಬೆಲೆ ಯಲ್ಲಿನೂತನ ತಾಂತ್ರಿಕತೆ ಅಳವಡಿಸಿದ 1600 ಹೆಕ್ಟೇರ್ ಪ್ರದೇಶದ ರೈತರಿಗೆ ರೂ.96 ಲಕ್ಷಗಳ ಸಹಾಯಧನವನ್ನ ಡಿ.ಬಿ.ಟಿ ಮುಖಾಂತರ ವರ್ಗಾವಣೆ ಮಾಡಲಾಗಿದೆ. ಹಾಗೂ ಯೋಜನೆಯಡಿ ಸಹಘಟಕಗಳಾದ ಲಘು ಪೋಷಕಾಂ ಶಗಳು ಸಸ್ಯ ಸಂರಕ್ಷಣಾ ಔಷಧಿಗಳು ಸಸ್ಯ ಸಂರಕ್ಷಣಾ ಉಪಕರಣಗಳು ತುಂತುರು ನೀರಾವರಿ ಘಟಕಗಳು ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಲ್ಲ ವಿತರಣೆ ಮಾಡಲಾಗಿದೆ. ಮಾರ್ಚ್ ಅಂತ್ಯಕ್ಕೆ ರೂ.60.63 ಲಕ್ಷ ಅನುದಾನದಲ್ಲಿ ವಿವಿಧ ಕೃಷಿ ಯಂತ್ರೋಪಕರಣಗಳನ್ನು ವಿತರಣೆ ಮಾಡಲಾಗಿರುತ್ತದೆ.

 6.ರೈತಸಿರಿ: ರೈತಸಿರಿ ಯೋಜನೆಯಡಿ ಸಿರಿಧಾನ್ಯಗಳಾದ ಊದಲು, ನವಣೆ, ಹಾರಕಾ, ಕೊರಲೆ, ಸಾಮೆ ಮತ್ತು ಬರಗು ಬೆಳೆಗಳ ವಿಸ್ತೀರ್ಣ ಹಾಗೂ ಉತ್ಪಾದನೆ ಹೆಚ್ಚಿಸಲು ಪ್ರತಿ ಹೆಕ್ಟೇರ್ಗೆ ರೂ. 10000 ಪ್ರೋತ್ಸಾಹಧನ ನೀಡಲಾಗುವುದು. ಅದರಂತೆ 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 185.32 ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯಗಳ ವಿಸ್ತೀರ್ಣ ಅಳವಡಿಸಿ ಸಿರಿಧಾನ್ಯ ಬೆಳೆಗಳಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಹಾಗೂ ಸಿರಿಧಾನ್ಯ ಬೆಳೆದ 279 ರೈತರಿಗೆ ಪ್ರೋತ್ಸಾಹಧನ ವರ್ಗಾವಣೆಯನ್ನು ಡಿ.ಬಿ.ಟಿ ಮುಖಾಂತರ ವರ್ಗಾವಣೆ ಮಾಡಲಾಗಿದೆ.

 7.ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ : ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯಡಿ ಸಾವಯವ ಪರಿಕರ ಆಧಾರಿತ (ರಾಸಾಯನಿಕ ಮುಕ್ತ) ಪದ್ದತಿಯಲ್ಲಿ ನೈಸರ್ಗಿಕ ಕೃಷಿಯನ್ನು ಅಳವಡಿಸಿ ಅಲ್ಪ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಲು ರೈತರಿಗೆ ಉತ್ತೇಜನಕಾರಿಯಾಗಿ ಸಾವಯವ ಕೃಷಿ ಪರಿಕರ/ಘಟಕಗಳಿಗೆ ಪ್ರೋತ್ಸಾಹಧನ ನೀಡಲಾಗುವುದು. ಅದರಂತೆ ಯೋಜನೆಯಡಿ ನೈಸರ್ಗಿಕ ಕೃಷಿ ಅಳವಡಿಸಿಕೊಂಡ 251 ರೈತರಿಗೆ ಸಾವಯವ ಕೃಷಿ ಘಟಕ/ಪರಿಕರಗಳಿಗೆ ಸಹಾಯಧನದಲ್ಲಿ ಡಿ.ಬಿ.ಟಿ ಮುಖಾಂತರ ವರ್ಗಾವಣೆ ಮಾಡಲಾಗಿದೆ.

8.ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಭಾರತ ಸರ್ಕಾರವು ರೈತರ ಆರ್ಥಿಕ ಮಟ್ಟ ಸುಧಾರಣೆಗಾಗಿ ವಾರ್ಷಿಕ ರೂ.6000 ಗಳನ್ನು 3 ಸಮಾನ ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ. ಅದರಂತೆ ರಾಮನಗರ ಜಿಲ್ಲೆಯಲ್ಲಿ ಒಟ್ಟು 128244 ಸಂಖ್ಯೆಯ ರೈತರನ್ನು ಪಿ.ಎಂ. ಕಿಸಾನ್ ತಂತ್ರಾಂಶದಲ್ಲಿ ದಾಖಲಿಸಲಾಗಿರುತ್ತದೆ.

 

ಇಲಾಖೆಯ ಅಂಕಿಅಂಶ:

 1 ಜಿಲ್ಲೆಯಲ್ಲಿ ಒಟ್ಟು 114000 ಹೆ. ವಿಸ್ತೀರ್ಣವು ಕೃಷಿ ಪ್ರದೇಶವಾಗಿರುತ್ತದೆ.
 2. ಜಿಲ್ಲೆಯಲ್ಲಿ ಒಟ್ಟು 271448 ಸಂಖ್ಯೆಯ ರೈತ ಕುಟುಂಬಗಳಿರುತ್ತವೆ.
3. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ 851 ಮಿ.ಮೀ. ಇರುತ್ತದೆ.
4. ಜಿಲ್ಲೆಯ ಎಲ್ಲಾ 18 ಹೋಬಳಿಗಳಲ್ಲಿ ರೈತ ಸಂಪರ್ಕ ಕೇಂದ್ರಗಳಿರುತ್ತವೆ.

 

 ಇಲಾಖೆಯ ಅಧಿಕೃತ ವಿಳಾಸ ಮೊಬೈಲ್ ಸಂಖ್ಯೆ ಮತ್ತು ಮೇಲ್ ವಿಳಾಸ:

 

ಜಂಟಿ ಕೃಷಿ ನಿರ್ದೇಶಕರು ಕಛೇರಿ, ರಾಮನಗರ
ಕ್ರ.ಸಂ ಹೆಸರು ಹುದ್ದೆ ಮೊಬೈಲ್ ಸಂಖ್ಯೆ ಕಛೇರಿಯ ಇಮೇಲ್ ವಿಳಾಸ
1 ಕೆ.ಹೆಚ್.ರವಿ ಜಂಟಿ ಕೃಷಿ ನಿರ್ದೇಶಕರು 8277932400 jdarmgm@gmail.com
2 ಡಾ|| ವಿನಿತ.ಬಿ.ಕೆ ಸಹಾಯಕ ಕೃಷಿ ನಿರ್ದೇಶಕರು (ಕೇಂದ್ರ) 8867448527
3 ಕೆ.ಎಂ.ನಾಗರಾಜ್ ಸಹಾಯಕ ಕೃಷಿ ನಿರ್ದೇಶಕರು (ವಿ.ತ) 7760989902
4 ರೇಷ್ಮಾ ಸುತಾರ್ ಸಹಾಯಕ ಕೃಷಿ ನಿರ್ದೇಶಕರು (ವಿ.ತ) 9880900517
5 ಸವಿತ ಹೆಚ್.ಬಿ ಕೃಷಿ ಅಧಿಕಾರಿ 9738571606
6 ಅನುಪಮ.ಸಿ.ಎಸ್ (ಕಾರ್ಯನಿರ್ವಹಣೆ) ತಾಂತ್ರಿಕ ಅಧಿಕಾರಿ 8277932447
ಉಪ ಕೃಷಿ ನಿರ್ದೇಶಕರ ಕಛೇರಿ, ರಾಮನಗರ
1 ಅಶೋಕ ಉಪ ಕೃಷಿ ನಿರ್ದೇಶಕರು 8277932401 ddaramangar@gmail.com
2 ಎನ್.ಕೆ.ರೇಣುಕಮ್ಮ ಕೃಷಿ ಅಧಿಕಾರಿ 8277932420
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ರಾಮನಗರ
1 ಪರಮೇಶ.ಡಿ ಸಹಾಯಕ ಕೃಷಿ ನಿರ್ದೇಶಕರು 8277932404 adaramanagara@gmail.com
2 ಪ್ರದೀಪ್.ಪಿ ಕೃಷಿ ಅಧಿಕಾರಿ, ಕೈಲಾಂಚ ರೈತ ಸಂಪರ್ಕ ಕೇಂದ್ರ, 9902095646
3 ಶೃತಿ.ಟಿ.ಬಿ ಕೃಷಿ ಅಧಿಕಾರಿ, ಬಿಡದಿ ರೈತ ಸಂಪರ್ಕ ಕೇಂದ್ರ, 9986141095
4 ನಂದಾ.ಎನ್ ಕೃಷಿ ಅಧಿಕಾರಿ, ಕೂಟಗಲ್ ರೈತ ಸಂಪರ್ಕ ಕೇಂದ್ರ, 8277932426
5 ಸುಕನ್ಯಾ.ಸಿ ಕೃಷಿ ಅಧಿಕಾರಿ, ಕಸಬಾ ರೈತ ಸಂಪರ್ಕ ಕೇಂದ್ರ, 8073260931
6 ಪ್ರಭಾಕರ್.ಎಂ ಕೃಷಿ ಅಧಿಕಾರಿ, ತಾಂತ್ರಿಕ 9740855696
7 ಚಿಕ್ಕವೀರಯ್ಯ.ಸಿ ಸಹಾಯಕ ಕೃಷಿ ಅಧಿಕಾರಿ, ಕಸಬಾ ರೈತ ಸಂಪರ್ಕ ಕೇಂದ್ರ 8277932433
8 ಕುಮಾರ್.ಬಿ ಸಹಾಯಕ ಕೃಷಿ ಅಧಿಕಾರಿ, ಬಿಡದಿ ರೈತ ಸಂಪರ್ಕ ಕೇಂದ್ರ 8277932421
9 ಎಂ.ಸಿ ಪರಶುರಾಮ ಕೃಷಿ ಸಹಾಯಕ, ಕೈಲಾಂಚ ರೈತ ಸಂಪರ್ಕ ಕೇಂದ್ರ 9980867790
10 ರಾಮಕೃಷ್ಣಾರಾಜೇಅರಸ್ ಕೃ.ಉ.ಮೇ, ಕಸಬಾ ರೈತ ಸಂಪರ್ಕ ಕೇಂದ್ರ 9980838931
11 ಲಿಂಗಪ್ಪ.ಎಂ ಸಹಾಯಕ ಕೃಷಿ ಅಧಿಕಾರಿ, ಕೈಲಾಂಚ ರೈತ ಸಂಪರ್ಕ ಕೇಂದ್ರ 9591552080
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಚನ್ನಪಟ್ಟಣ
1 ಅಪರ್ಣ.ಎಂ.ಜಿ ಸಹಾಯಕ ಕೃಷಿ ನಿರ್ದೇಶಕರು 9964347819 adachannapatna@gmail.com
2 ಬೊಮ್ಮೇಶ್.ಬಿ ತಾಂತ್ರಿಕ-1, ತಾಂತ್ರಿಕ 8277932459
3 ರುದ್ರಪ್ಪ.ಎಂ.ಆರ್ ಕೃಷಿ ಅಧಿಕಾರಿ, ಕಸಬಾ ರೈತ ಸಂಪರ್ಕ ಕೇಂದ್ರ, 8277932418
4 ಮಂಜುನಾಥ.ಪಿ ಕೃಷಿ ಅಧಿಕಾರಿ, ಮಳೂರು ರೈತ ಸಂಪರ್ಕ ಕೇಂದ್ರ, 8277932435
5 ಮುಕ್ತಾ.ಜೆ ಕೃಷಿ ಅಧಿಕಾರಿ, ವಿರುಪಾಕ್ಷಿಪುರ ರೈತ ಸಂಪರ್ಕ ಕೇಂದ್ರ, 9591234226
6 ಎನ್.ಗಂಗನರಸಿಂಹಯ್ಯ ಸಹಾಯಕ ಕೃಷಿ ಅಧಿಕಾರಿ, ಕಸಬಾ ರೈತ ಸಂಪರ್ಕ ಕೇಂದ್ರ, 9880969492
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಕನಕಪುರ
1 ಶ್ರೀ.ರಾಧಕೃಷ್ಣ ಕೆ.ಆರ್ ತಾಂತ್ರಿಕ ಅಧಿಕಾರಿ 8277932446 adaknkpr@rediffmail.com
2 ರಘು.ಟಿ.ಎನ್ ಕೃಷಿ ಅಧಿಕಾರಿ, ಸಾತನೂರು ರೈತ ಸಂಪರ್ಕ ಕೇಂದ್ರ, 8277932461
3 ಮಂಜುಳ.ಪಿ ಕೃಷಿ ಅಧಿಕಾರಿ, ಉಯ್ಯಂಬಳ್ಳಿ ರೈತ ಸಂಪರ್ಕ ಕೇಂದ್ರ, 8277932457
4 ಸುಂದರೇಶ.ಬಿ.ಆರ್ ಕೃಷಿ ಅಧಿಕಾರಿ, ಕಸಬಾ ಮತ್ತು ಮರಳವಾಡಿ ರೈತ ಸಂಪರ್ಕ ಕೇಂದ್ರ, 9900240339
5 ಮೇಘಾಲಯ.ಬಿ.ಎನ್ ಕೃಷಿ ಅಧಿಕಾರಿ, ಕೋಡಿಹಳ್ಳಿ ರೈತ ಸಂಪರ್ಕ ಕೇಂದ್ರ, 9650248599
6 ಸಿಂದು.ಎಸ್ ರಾಜ್ ಕೃಷಿ ಅಧಿಕಾರಿ, ಹಾರೋಹಳ್ಳಿ ರೈತ ಸಂಪರ್ಕ ಕೇಂದ್ರ, 8277932454
7 ಎಂ.ಶ್ರೀನಿವಾಸಯ್ಯ ಸಹಾಯಕ ಕೃಷಿ ಅಧಿಕಾರಿ, ಮರಳವಾಡಿ ರೈತ ಸಂಪರ್ಕ ಕೇಂದ್ರ 7624856305
8 ಪಿ.ಶ್ರೀನಿವಾಸ್ ಸಹಾಯಕ ಕೃಷಿ ಅಧಿಕಾರಿ, ಹಾರೋಹಳ್ಳಿ ರೈತ ಸಂಪರ್ಕ ಕೇಂದ್ರ 8277932458
9 ಸಂಪತ್ ಕುಮಾರ್ ಬಿ.ಎಸ್
(ಕಾರ್ಯ ನಿರ್ವಹಣೆ)
ಕೃಷಿ ಸಹಾಯಕ, ಸಾತನೂರು ರೈತ ಸಂಪರ್ಕ ಕೇಂದ್ರ 8277932443
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಮಾಗಡಿ
1 ಶಿವಶಂಕರ್ ಸಹಾಯಕ ಕೃಷಿ ನಿರ್ದೇಶಕರು 9916464148 adamagadi@gmail.com
2 ಮಹೇಶ್.ಎಂ. ಕೃಷಿ ಅಧಿಕಾರಿ, ತಾಂತ್ರಿಕ ಅಧಿಕಾರಿ 9380553731
3 ಎ.ಎಸ್.ಅಶೋಕ ಕುಮಾರ್ ಕೃಷಿ ಅಧಿಕಾರಿ, ಮಾಡಬಾಳ್ ರೈತ ಸಂಪರ್ಕ ಕೇಂದ್ರ, 8277932416
4 ಹೆಚ್.ಅಶೋಕ ಕೃಷಿ ಅಧಿಕಾರಿ, ಸೋಲೂರು ಮತ್ತು ಕುದೂರು ರೈತ ಸಂಪರ್ಕ ಕೇಂದ್ರ, 8277932437
5 ಶಿವನಂದಾ.ವಿ ಕೃಷಿ ಅಧಿಕಾರಿ, ಕಸಬಾ ರೈತ ಸಂಪರ್ಕ ಕೇಂದ್ರ, 8277932408
7 ನಾಗಭೂಷಣ ಸಹಾಯಕ ಕೃಷಿ ಅಧಿಕಾರಿ, ತಿಪ್ಪಸಂದ್ರ ರೈತ ಸಂಪರ್ಕ ಕೇಂದ್ರ 8277932409
8 ಹನುಮಂತನಾಯ್ಕ.ಬಿ ಸಹಾಯಕ ಕೃಷಿ ಅಧಿಕಾರಿ, ಮಾಡಬಾಳ್ ರೈತ ಸಂಪರ್ಕ ಕೇಂದ್ರ 8277932411

 

 ಸಾಧನೆಗಳು:

             2019-20 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 90771ಹೆ. ಪ್ರದೇಶದಲ್ಲಿ, ಹಿಂಗಾರು ಹಂಗಾಮಿನಲ್ಲಿ 4342 ಹೆ. ಪ್ರದೇಶದಲ್ಲಿ, ಬೇಸಿಗೆ ಹಂಗಾಮಿನಲ್ಲಿ 258 ಹೆ. ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಪ್ರಗತಿಯನ್ನು ಸಾಧಿಸಲಾಗಿದೆ.

 

 ಮಾಹಿತಿ ಹಕ್ಕು ಕಾಯಿದೆ:

ಸಾರ್ವಜನಿಕ ಮಾಹಿತಿ ಅಧಿಕಾರಿ (ಜಿಲ್ಲೆ/ತಾಲ್ಲೂಕು ಅಧಿಕಾರಿಗಳ) ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಮೇಲ್ಮನವಿ ಪ್ರಾಧಿಕಾರಿ
ಸಹಾಯಕ ಕೃಷಿ ನಿರ್ದೇಶಕರು (ಕೇಂದ್ರ)
ಜಂಟಿ ಕೃಷಿ ನಿರ್ದೇಶಕರ ಕಛೇರಿ,
ರಾಮನಗರ ಜಿಲ್ಲೆ.
ಕೃಷಿ ಅಧಿಕಾರಿಗಳು(ತಾಂತ್ರಿಕ ಅಧಿಕಾರಿ)
ಜಂಟಿ ಕೃಷಿ ನಿರ್ದೇಶಕರ ಕಛೇರಿ,
ರಾಮನಗರ ಜಿಲ್ಲೆ.
ಜಂಟಿ ಕೃಷಿ ನಿರ್ದೇಶಕರು
ರಾಮನಗರ ಜಿಲ್ಲೆ
ರಾಮನಗರ
ಕೃಷಿ ಅಧಿಕಾರಿ(ತಾಂತ್ರಿಕ ಅಧಿಕಾರಿ)
ಉಪ ಕೃಷಿ ನಿರ್ದೇಶಕರ ಕಛೇರಿ
ರಾಮನಗರ ಜಿಲ್ಲೆ
ಅಧೀಕ್ಷಕರು,
ಉಪ ಕೃಷಿ ನಿರ್ದೇಶಕರ ಕಛೇರಿ
ರಾಮನಗರ ಜಿಲ್ಲೆ
ಉಪ ಕೃಷಿ ನಿರ್ದೇಶಕರು
ರಾಮನಗರ ಜಿಲ್ಲೆ,
ರಾಮನಗರ
ಕೃಷಿ ಅಧಿಕಾರಿ(ತಾಂತ್ರಿಕ ಅಧಿಕಾರಿ)
ಸಹಾಯಕ ಕೃಷಿ ನಿರ್ದೇಶಕರ ಕಛೇರಿ
ರಾಮನಗರ ತಾಲ್ಲೂಕು.
ಅಧೀಕ್ಷಕರು,
ಸಹಾಯಕ ಕೃಷಿ ನಿರ್ದೇಶಕರ ಕಛೇರಿ
ರಾಮನಗರ ತಾಲ್ಲೂಕು.
ಸಹಾಯಕ ಕೃಷಿ ನಿರ್ದೇಶಕರು
ರಾಮನಗರ
ಕೃಷಿ ಅಧಿಕಾರಿ(ತಾಂತ್ರಿಕ ಅಧಿಕಾರಿ)
ಸಹಾಯಕ ಕೃಷಿ ನಿರ್ದೇಶಕರ ಕಛೇರಿ
ಚನ್ನಪಟ್ಟಣ ತಾಲ್ಲೂಕು.
ಅಧೀಕ್ಷಕರು,
ಸಹಾಯಕ ಕೃಷಿ ನಿರ್ದೇಶಕರ ಕಛೇರಿ
ಚನ್ನಪಟ್ಟಣ ತಾಲ್ಲೂಕು.
ಸಹಾಯಕ ಕೃಷಿ ನಿರ್ದೇಶಕರು
ಚನ್ನಪಟ್ಟಣ
ಕೃಷಿ ಅಧಿಕಾರಿ(ತಾಂತ್ರಿಕ ಅಧಿಕಾರಿ)
ಸಹಾಯಕ ಕೃಷಿ ನಿರ್ದೇಶಕರ ಕಛೇರಿ
ಕನಕಪುರ ತಾಲ್ಲೂಕು.
ಅಧೀಕ್ಷಕರು,
ಸಹಾಯಕ ಕೃಷಿ ನಿರ್ದೇಶಕರ ಕಛೇರಿ
ಕನಕಪುರ ತಾಲ್ಲೂಕು.
ಸಹಾಯಕ ಕೃಷಿ ನಿರ್ದೇಶಕರು
ಕನಕಪುರ
ಕೃಷಿ ಅಧಿಕಾರಿ(ತಾಂತ್ರಿಕ ಅಧಿಕಾರಿ)
ಸಹಾಯಕ ಕೃಷಿ ನಿರ್ದೇಶಕರ ಕಛೇರಿ
ಮಾಗಡಿ ತಾಲ್ಲೂಕು.
ಅಧೀಕ್ಷಕರು,
ಸಹಾಯಕ ಕೃಷಿ ನಿರ್ದೇಶಕರ ಕಛೇರಿ
ಮಾಗಡಿ ತಾಲ್ಲೂಕು.
ಸಹಾಯಕ ಕೃಷಿ ನಿರ್ದೇಶಕರು
ಮಾಗಡಿ