ಮುಚ್ಚಿ

ಶ್ರೀ ಸೋಮೇಶ್ವರಸ್ವಾಮಿ ದೇವಸ್ಥಾನ

ವರ್ಗ ಧಾರ್ಮಿಕ

Someshwara Tempಶ್ರೀ ಸೋಮೇಶ್ವರಸ್ವಾಮಿ ದೇವಸ್ಥಾನ

       ಬೆಂಗಳೂರಿನ ಪಶ್ಚಿಮದಲ್ಲಿರುವ ಮಾಗಡಿ ಪ್ರಸಿದ್ಧ ಪುಣ್ಯಕ್ಷೇತ್ರ. ಪುರಾತನಕಾಲದಲ್ಲಿ ಮಾಂಡವ್ಯ ಋಷಿಗಳು ಇಲ್ಲಿ ತಪಸ್ಸನ್ನು ಆಚರಿಸಿದ್ದರಿಂದಲೇ ಈ ಕ್ಷೇತ್ರವನ್ನು ಮಾಂಡವ್ಯ ಕುಟೀ ಎಂದು ಕರೆಯಲಾಗುತ್ತದೆ. ಕಾಲಾನಂತರದಲ್ಲಿ ಇದು ಮಾಗಡಿಯಾಗಿ ಕರೆಯಲ್ಪಡುತ್ತದೆ. ಬೆಂಗಳೂರಿನಿಂದ 48 ಕಿ.ಮೀ ದೂರವಿರುವ ಈ ಸೋಮೇಶ್ವರ ದೇವಾಲಯವು ಮಾಗಡಿ ಬಸ್‌ ನಿಲ್ದಾಣದಿಂದ 2 ಕಿ.ಮೀ ದೂರದಲ್ಲಿದೆ. ಬ್ರಮರಾಂಬಾ ಸಹಿತ ಶ್ರೀ ಪ್ರಸನ್ನ ಸೋಮೇಶ್ವರ ದೇವಾಲಯ ಅಗ್ರಸ್ಥಾನದಲ್ಲಿದೆ. ಈ ದೇವಾಲಯವನ್ನು ಕೆಂಪೇಗೌಡರು – 1569ರಲ್ಲಿ ನಿರ್ಮಿಸಿದರು. ಕೇಂಪೇಗೌಡರವರ ಕುಲದೈವ ಶ್ರೀ.ಕಾಲಬೈರವೇಶ್ವರ ದೇವಾಲಯ. ಮನೆದೇವರನ್ನು ದರ್ಶಿಸಲು ಕೆಂಪೇಗೌಡರವರ ತಾಯಿ ಶ್ರೀ.ಕ್ಷೇತ್ರಕಾಶಿಗೆ ಹೋಗಲು ಬಯಸುತ್ತಾರೆ. ಅದರೆ ತುಂಬಾ ವಯಸ್ಸಾದ ತಾಯಿಯವರನ್ನು ಕಾಶಿಯಾತ್ರೆಗೆ ಕಳುಹಿಸಲು ಕೆಂಪೇಗೌಡರ ಮನಸ್ಸು ಒಪ್ಪುವುದಿಲ್ಲ. ಆದ್ದರಿಂದ ಋಷಿಮುನಿಗಳೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದಾಗ, ಕಾಶಿಯಿಂದ ಸಾಲಿಗ್ರಾಮ ಶಿವಲಿಂಗವನ್ನು ತರಿಸಿ, ಪೂಜಿಸಿದರೆ ಕಾಶಿಯಾತ್ರೆಯ ಸಂಪೂರ್ಣ ಫಲ ದೊರೆಯುವುದೆಂದು ತಿಲಿಸುತ್ತಾರೆ. ಅದರಂತೆ ಕೆಂಪೇಗೌಡರು ತಮ್ಮ ವಯಸ್ಸಾದ ತಾಯಿಗಾಗಿ ಕಾಶಿಯಿಂದ ಸಾಲಿಗ್ರಾಮ ಶಿವಲಿಂಗವನ್ನು ತರಿಸಿ ಮ್ರತ್ಯುಂಜಯ ಪೀಠದಲ್ಲಿ ಆ ಶಿವಲಿಂಗವನ್ನು ಪ್ರತಿಷ್ಠಾಪನೆಮಾಡಿ, ಸೋಮೇಶ್ವರ ದೇವಾಲಯವನ್ನು ನಿರ್ಮಿಸುತ್ತಾರೆ. ಬೃಹತ್‌ ಬಂಡೆಯ ಮೇಲೆ ನಿರ್ಮಿಣವಾಗಿರುವ ಈ ದೇವಾಲಯ ನೋಡಲು ಅತ್ಯಂತ ಸುಂದರವಾಗಿದೆ. 510 ವರ್ಷಗಳ ಹಿಂದೆ ನಿರ್ಮಾಣದ ದೇವಾಲಯವಾಗಿದ್ದು, ಶಕ್ತಿಶಾಲಿ ದೇವಾಲಯವಾಗಿದೆ.

ದೇವಾಲಯದ ಪ್ರಾಂಗಣದಲ್ಲಿ ಸತ್ಯನಾರಾಯಣನ ವಿಗ್ರಹವನ್ನು ಸ್ಥಾಪಿಸಿದ್ದು ಪ್ರತಿ ಹುಣ್ಣಿಮೆಯ ಸಾಯಂಕಾಲದಂದು ಸತ್ಯನಾರಾಯಣ ಪೂಜೆ ನಡೆಯುತ್ತದೆ. ಹೊಯ್ಸಳ ಶೈಲಿಯಲ್ಲಿ ನಿರ್ಮಾಣವಾಗಿರುವ ಅತ್ಯದ್ಭುತ ಶಿಲ್ಪಕಲಾ ಶೈಲಿಯನ್ನು ಒಳಗೊಂಡಿದೆ. ‌ಸಂಕೀರ್ಣದಿಂದ ಸ್ವಲ್ಪ ದೂರದಲ್ಲಿ ಶಿವನ ವಾಹನವಾದ ನಂದಿಯ ಮಂಟಪವಿದೆ. ಶ್ರೀ ಸೋಮೇಶ್ವರ ಸ್ವಾಮಿಯ ಲಿಂಗ ಮೂರು ಅಡಿ ಎತ್ತರವಿದ್ದು, ದ್ವಾರ ಕಂಬ ಮತ್ತು ನೃತ್ಯ ಮಂಟಪಗಳಲ್ಲಿ ನೃತ್ಯ ಶಿಲ್ಪಕಲಾಕೃತಿಗಳು ಅತ್ಯಂತ ಸುಂದರವಾಗಿದೆ.  ಹೊಯ್ಸಳ ಶೈಲಿಯಲ್ಲಿ ದೇವಾಲಯ ನಿರ್ಮಾಣವಾಗಿದ್ದು, ಅತ್ಯದ್ಬುತ ಶಿಲ್ಪಕಲಾ ವೈಭವದಿಂದ ಕೂಡಿದೆ. ದೇವಾಲಯದ ಹಜಾರದಲ್ಲಿ ಕೆಂಪೇಗೌಡರು ನ್ಯಾಯತೀರ್ಪಗಳನ್ನು ನೀಡುತ್ತಿದ್ದರು. ದೇವಾಲಯದ ಇನ್ನೊಂದು ಕಡೆ ಕೆಂಪೇಗೌಡರು ದರ್ಬಾರನ್ನು ನಡೆಸುತ್ತಿದ್ದ ಹಚಾರವನ್ನು ಸಹ ನೋಡಬಹುದು. ಕೆಂಪೇಗೌಡರ ಹಜಾರದಲ್ಲಿ ಸಂಗೀತ, ಸೇವೆಗಳು, ಭರತನಾಟ್ಯ  ಹಾಗೂ ಸಾಂಸ್ಕೃತಿಕ ಸೇವೆಗಳು ನಡೆಯುತ್ತಿದ್ದವು. ದೇವಾಲಯದ ಒಂದು ಕಂಬವನ್ನು ನಾಣ್ಯದಿಂದ ಬಡಿದರೆ     ಕಂಚಿನ ಶಬ್ಧ ಬರುವುದು ಇಲ್ಲಿನ ವಿಶೇಷತೆಯಾಗಿದೆ. ಸುಮಾರು 500 ವರ್ಷಗಳಹಿಂದೆ ನೆಟ್ಟಿರುವ ಬಿಲ್ವಪತ್ರೆಗಳ ಮರಗಳನ್ನು ಇಂದಿಗೂ ಕಾಣಬಹುದು. ದೇವಾಲಯದ ನೈರುತ್ಯ ದಿಕ್ಕಿನಲ್ಲಿರುವ ಬೆಟ್ಟದ ಮೇಲೆ ಇಮ್ಮಡಿ ಕೆಂಪೇಗೌಡರ ಕಾವಲು ಗೋಪುರವನ್ನು ಕಾಣಬಹುದು.

ಹತ್ತಿರದ ಪ್ರವಾಸಿ ಸ್ಥಳಗಳು

  1. ಮಾಗಡಿ ಕೋಟೆ: ಸೋಮೇಶ್ವರ ದೇವಾಲಯದಿಂದ 1 ಕಿ.ಮೀ. ದೂರದಲ್ಲಿರುವ ಮಾಗಡಿ ಕೋಟೆ
  2. ತಿರುಮಲ ಶೀ.ರಂಗನಾಥಸ್ವಾಮಿ ದೇವಾಲಯ; ಸೋಮೇಶ್ವರ ದೇವಾಲಯದಿಂದ 03 ಕಿ.ಮೀ. ದೂರದಲ್ಲಿರುವ ತಿರುಮಲ ಶೀ.ರಂಗನಾಥಸ್ವಾಮಿ ದೇವಾಲಯ ಅತ್ಯಂತ ಪುರಾತನವಾದ ಪ್ರಸಿದ್ದ ದೇವಾಲಯವಾಗಿದೆ.
  3. ಸಾವನ್‌ ದುರ್ಗ: ಸೋಮೇಶ್ವರ ದೇವಾಲಯದಿಂದ 13 ಕಿ.ಮೀ. ದೂರದಲ್ಲಿರುವ ಸಾವನ್‌ದುರ್ಗ ರಾಮನಗರದ ಪ್ರಸಿದ್ದ ಧಾರ್ಮಿಕ ಹಾಗೂ ಟ್ರಕ್ಕಿಂಗ್‌ ಸ್ಥಳವಾಗಿದೆ.
  4. ವೈ.ಜಿ ಗುಡ್ಡ ಜಲಾಶಯ : ಸೋಮೇಶ್ವರ ದೇವಾಲಯದಿಂದ 15 ಕಿ.ಮೀ. ದೂರದಲ್ಲಿರುವ ವೈ.ಜಿ ಗುಡ್ಡ ಜಲಾಶಯ ಆಕರ್ಷಣೀಯವಾಗಿದೆ.

ಹತ್ತಿರದ ವಸತಿ ವ್ಯವಸ್ಥೆಗಳ ವಿವರ

ಕ್ರ.ಸಂ

ಹೋಂಸ್ಟೇ ಹೆಸರು

ವಿಳಾಸ

ಮೊಬೈಲ್ಸಂಖ್ಯೆ

1

ಕನಸು ಹೋಂಸ್ಟೇ

ವಡ್ಡರದೊಡ್ಡಿ ಗ್ರಾಮ, ಶಾನಭೋಗನಹಳ್ಳಿ ಕೂಟಗಲ್ ಹೋಬಳಿ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ.

9632636376

2

ವೈನವಿ ಇಕೋವರ್ಲ್ಡ್ ಹೋಂ-ಸ್ಟೇ

ಆಲೂರು ಗ್ರಾಮ, ಸೋಲೂರು ಹೋಬಳಿ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ.

9972993021

3

ದಿ ಬಾಸ್ಕ್ ಹೌಸ್ ಹೋಂಸ್ಟೇ

ತಟ್ಟೇಕೆರೆ ಗ್ರಾಮ, ಸೋಲೂರು ಹೋಬಳಿ, ಮಾಗಡಿ ತಾಲ್ಲೂಕು,ರಾಮನಗರಜಿಲ್ಲೆ.

9448066799

4

ಜಿ.ಟಿ ಫಾರಂ

ಹೋಂಸ್ಟೇ

ಮರಲಗೊಡಲ ಗ್ರಾಮ, ಕಸಬಾ ಹೋಬಳಿ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ.

9686910732