ಮುಚ್ಚಿ

ರಾಮದೇವರ ಬೆಟ್ಟಾ

ನಿರ್ದೇಶನ

ಶ್ರೀ ರಾಮದೇವರ ಬೆಟ್ಟ: 

ಪ್ರಭು ಶ್ರೀ ರಾಮಚಂದ್ರನ ನೆಲೆಬೀಡಾದ ರಾಮದೇವರ ಬೆಟ್ಟವು ರಾಮನಗರದಿಂದ 4 ಕಿ.ಮೀ ದೂರದಲ್ಲಿದೆ. ರಾಮದೇವರ ಬೆಟ್ಟದ ಪ್ರಾರಂಭದಲ್ಲಿ ಆಂಜನೇಯದ ಉದ್ಬವ ಮೂತಿಯನ್ನು ಕಾಣಬಹುದು.ಏಕಶಿಲೆಯಲ್ಲಿ ರಾಮ, ಸೀತಾ, ಲಕ್ಷ್ಮಣ ಮತ್ತು ಆಂಜನೇಯನನ್ನು ಸುಂದರವಾಗಿ ಕೆತ್ತಲಾಗಿದೆ. ಶ್ರೀ ರಾಮಚಂದ್ರರ ಪಾದ ಸ್ಪರ್ಶದಿಂದ ಪುನೀತವಾದ ಕನಾಟಕದ ಪ್ರಮುಖ ಸ್ಥಳಗಳಲ್ಲಿ ಒಂದಾದ ರಾಮನಗರ ಜಿಲ್ಲೆ ಹಾಗೂ ಇಲ್ಲಿರುವ ರಾಮದೇವರ ಬೆಟ್ಟವು ದಕ್ಕಿಣದ ಚಿತ್ರಕೂಟ ಎಂದೇ ಪ್ರಸಿದ್ದಿಯಾಗಿದೆ. ಪ್ರಖ್ಯಾತ ಹಿಂದಿಯ ಶೋಲೆ ಚಲನ ಚಿತ್ರದ ಚಿತ್ರೀಕರಣ ನಡೆದ ರಾಮಗಿರಿ ಬೆಟ್ಟವನ್ನು ಕನ್ನಡಿಗರು ರಾಮದೇವರ ಬೆಟ್ಟ ಹೊರ ರಾಜ್ಯದವರು ಶೋಲೆ ಬೆಟ್ಟ ಎಂದೇ ಕರೆಯುತ್ತಾರೆ.  ಈ ಬೆಟ್ಟದ ಹಿನ್ನೆಲೆ ನಮ್ಮನ್ನು ರಾಮಾಯಣದ ಕಾಲಕ್ಕೆ ಮರಳಿಸುತ್ತದೆ. ಬೆಟ್ಟದ ಮೇಲೆ ಪಟ್ಟಾಭಿರಾಮನ ಪುರಾತನ ದೇವಾಲಯ ರಾಮೇಶ್ವರ ದೇವಾಲಯ ಹಾಗೂ ಆಂಜನೇಯನ ದೇವಾಲಯಗಳಿವೆ. ವರ್ಷ ಪೂರ್ತಿ ನೀರಿರುವ ರಾಮತೀರ್ಥದ ದೊಣೆ ಇದೆ. ಪಟ್ಟಾಭಿರಾಮ ದೇಗುಲದ ಮುಂಬಾಗದಲ್ಲಿ ಬ್ರಹದಾಕಾರದಲ್ಲಿ ನಿಂತಿರುವ ಬಂಗಿಯಲ್ಲಿ ಏಳು ಬಂಡೆಗಳಿವೆ. ಇವು ಸಪ್ತ ಋಷಿಗಳ ಸಂಕೇತವೆಂದು ಹೇಳಲಾಗುತ್ತದೆ. ವನವಾಸದ ಸಂದರ್ಭದಲ್ಲಿ ಶ್ರೀರಾಮನು ಸೀತಾ ಲಕ್ಷ್ಮಣರ ಜೊತೆಯಲ್ಲಿ ಒಂದುವರ್ಷಕ್ಕೂ ಹೆಚ್ಚುಕಾಲ ಈ ಬೆಟ್ಟದಲ್ಲಿ ತಂಗಿದ್ದನು ಎಂಬ ಪ್ರತೀತಿ ಇದೆ. ಪಟ್ಟಾಭಿರಾಮ ದೇಗುಲದ ಆವರಣದಲ್ಲಿ ಒಂದು ಕೊಳ(ದೊಣೆ) ಇದು. ವನವಾಸದ ಸಂದರ್ಭದಲ್ಲಿ ಸೀತಾ ಮಾತರಗೆ ಬಾಯಾರಿಕೆಯಾಗಿದ್ದರಿಂದ ಶ್ರೀರಾಮನು ಬಾಣ ಹೊಡೆದು ಪಾತಾಳಗಂಗೆಯನ್ನು ಹೊರತೆಗೆದನು ಎಂದು ಪುರಾಣದಲ್ಲಿ ಹೇಳಲಾಗಿದೆ. ಇದನ್ನೇ ರಾಮತೀರ್ಥ ಎನ್ನಲಾಗುತ್ತದೆ. ಇಲ್ಲಿಯ ವಿಸ್ಮಯವೆಂದರೆ ಈ ಪ್ರದೇಶದಲ್ಲಿ ಎಷ್ಠ ಹುಡುಕಿದರೂ ಒಂದು ಕಾಗೆಯೂ ಸುಳಿಯುವುದಿಲ್ಲ. ವನವಾಸದ ಸಂದರ್ಭದಲ್ಲಿ ಕಾಕಾಸುರನು ಸೀತಾಮಾತೆಯನ್ನು ಕೆಣಕುತ್ತಾನೆ.  ಇದರಿಂದ ಕೋಪಗೊಂಡ ಶ್ರೀರಾಮನು ಕಾಕಾಸುರನ ಕಣ್ಣನ್ನು ಬಾಣದಿಂದ ಹೊಡೆದು ಕಿತ್ತು ಹಾಕುತ್ತಾನೆ. ಅಂದಿನಿಂದ ಈ ಸ್ಥಳದಲ್ಲಿ ಕಾಗೆಗಳು ಹಾರಾಡುವುದಿಲ್ಲ.  ಈ ಬೆಟ್ಟದ ಮತ್ತೊಂದು ವಿಶೇಷವೇನೆಂದರೆ, ದೇಶದ ಏಕೈಕ ರಣಹದ್ದು ಸಂರಕ್ಷಣಾ ತಾಣವಾಗಿದೆ. ರಾಮಾಯಣದ ಕಾಲದ ಜಟಾಯು ಪಕ್ಷಿಯ ಆವಾಸ ಸ್ಥಾನವಾಗಿರುವುದರಿಂದ ಇಂದಿಗೂ ಸಹ ಹೆಚ್ಚಿನ ಸಂಖ್ಯೆಯ ರಣಹದ್ದುಗಳು ಕಾಣುತ್ತವೆ. ಈ ರಾಮದೇವರ ಬೆಟ್ಟದಲ್ಲಿರುವ ಪಟ್ಟಾಭಿರಾಮ ದೇವಾಲಯಕ್ಕೆ ಶ್ರಾವಣ ಮಾಸದಲ್ಲಿ ರಾಜ್ಯ ಹೊರರಾಜ್ಯಗಳ ಪ್ರವಾಸಿಗರು ಬೇಟಿ ನೀಡುತ್ತಾರೆ. ಶ್ರೀ ರಾಮಚಂದ್ರರು ನನ್ನ ಪರಿವಾರ ಸಮೇತರಾಗಿ ಇವತ್ತಿಗೂ ಈ ಬೆಟ್ಟದಲ್ಲಿ ನೆಲೆಸಿದ್ದಾರೆ ಎಂದು ಭಕ್ತಾದಿಗಳ ನಂಬಿಕೆಯಾಗಿದ್ದು, ಇಂದಿಗೂ ಈ ಬೆಟ್ಟವನ್ನು ಅತ್ಯಂತ ಪೂಜನೀಯವಾಗಿ ನೋಡುತ್ತಾರೆ.

ಸಮುದ್ರ ಮಟ್ಟದಿಂದ 1000 ಅಡಿಗಳಿಗಿಂತ ಎತ್ತರದಲ್ಲಿರುವ ಈ ಬೆಟ್ಟ ಚಾರಣ ಪ್ರಿಯರಿಗೆ ಉತ್ತಮ ಸ್ಥಳವಾಗಿದೆ. ಬೆಂಗಳೂರಿನಿಂದ ಕೇವಲ 50 ಕಿ.ಮೀ. ದೂರದಲ್ಲಿರುವ ಈ ಸ್ಥಳ ವಾರಾಂತ್ಯದ ಪ್ರವಾಸಕ್ಕೆ ಪ್ರಶಸ್ತವಾದ ಸ್ಥಳವಾಗಿದೆ. ಇದು ಪ್ರಾಕೃತಿಕ ಸೌಂದರ್ಯ ಮಾತ್ರವಲ್ಲದೆ, ಐತಿಹಾಸಿಕ ಮತ್ತು ಧಾಮಿಕ ಮಹತ್ವ ಹೊಂದಿರುವ ಸ್ಥಳವಾಗಿದೆ.

ರಣಹದ್ದು ಅಭಯಾರಣ್ಯವು ಅಧಿಕೃತವಾಗಿ 2012 ರಲ್ಲಿ ಸ್ಥಾಪಿಸಲ್ಪಟ್ಟಿತು, ಆದರೆ ದೀರ್ಘ ದಶಕಗಳ ಕಾಲ, ಈಜಿಪ್ಟಿನ ಮತ್ತು ಬಿಳಿ-ಬೆಂಬಲಿತ ರಣಹದ್ದುಗಳು ಹಲವಾರು ದಶಕಗಳಿಂದ ರಾಮನಗರ ಬೆಟ್ಟಗಳಲ್ಲಿ ಸುತ್ತುವರೆದಿವೆ. ಭಾರತದಲ್ಲಿ ಕಂಡುಬರುವ ಒಂಬತ್ತರಲ್ಲಿ ರಾಮನಗರದಲ್ಲಿ ಕಂಡುಬರುವ ಮೂರು ಜಾತಿಗಳೆಂದರೆ. ವರ್ಷಗಳಲ್ಲಿ ರಣಹದ್ದು ಜನಸಂಖ್ಯೆಯ ಕುಸಿತದ ಬಗ್ಗೆ ಎಚ್ಚರಿಕೆಯಿಂದ – ಅಂದಾಜು 97% ನಷ್ಟು ಉದ್ದದ ಮತ್ತು ಈಜಿಪ್ಟಿನ ರಣಹದ್ದುಗಳ 99% ಕಣ್ಮರೆಯಾಗಿವೆ – ಪರಿಸರವಾದಿಗಳು ಮತ್ತು ಪಕ್ಷಿ ವೀಕ್ಷಕರು ಪ್ರದೇಶವನ್ನು ಅಭಯಾರಣ್ಯವೆಂದು ಘೋಷಿಸಲು ಪ್ರಚಾರ ಮಾಡಿದರು. 2012 ರಲ್ಲಿ ಸುಮಾರು 346.41 ಹೆಕ್ಟೇರ್ಗಳನ್ನು ರಣಹದ್ದುಗಳಿಗೆ ರಕ್ಷಿತ ಪ್ರದೇಶವಾಗಿ ಮೀಸಲಿರಿಸಲಾಯಿತು. ನಕ್ಷೆಯ ಈ ತೇಪೆಯೊಳಗೆ ಪ್ರಸ್ತಾವಿತ ಶೋಲೆ ಥೀಮ್ ಪಾರ್ಕ್ ಇದೆ.

ಹತ್ತಿರದ ಪ್ರವಾಸಿ ಸ್ಥಳಗಳು.  

  1. ಜಾನಪದ ಲೋಕ: ರಾಮದೇವರ ಬೆಟ್ಟದಿಂದ 10 ಕಿ.ಮೀ. ದೂರದಲ್ಲಿರುವ ಜಾನಪದ ಲೋಕ ಕನಾಟಕದ ಜಾನಪದ ಕಲೆ ಸಂಸ್ಕೃತಿ ಬುಡಕಟ್ಟು ಜನಾಂಗಗಳ ಜೀವನ ಶೈಲಿಯನ್ನು ಪ್ರತಿಬಿಂಬಿಸುವ ಸ್ಥಳವಾಗಿದೆ.
  2. ಕಣ್ವ ಜಲಾಶಯ: ರಾಮದೇವರ ಬೆಟ್ಟದಿಂದ 10 ಕಿ.ಮೀ. ದೂರದಲ್ಲಿರುವ ಕಣ್ವ ಜಲಾಶಯ ಪಿಕ್‌ನಿಕ್‌ ಸ್ಥಳವಾಗಿದೆ.
  3. ರೇವಣಸಿದ್ದೇಶ್ವರ ಬೆಟ್ಟ: ರಾಮದೇವರ ಬೆಟ್ಟದಿಂದ 15 ಕಿ.ಮೀ. ದೂರದಲ್ಲಿರುವ ರೇವಣಸಿದ್ದೇಶ್ವರ ಬೆಟ್ಟ ಐತಿಹಾಸಿಕ ಮತ್ತು ಟ್ರಕ್ಕಿಂಗ್‌ ಸ್ಥಳವಾಗಿದೆ.
  4. ಕೂಟ್‌ಗಲ್‌ ತಿಮ್ಮಪ್ಪನ ಬೆಟ್ಟ: ರಾಮದೇವರ ಬೆಟ್ಟದಿಂದ 15 ಕಿ.ಮೀ. ದೂರದಲ್ಲಿರುವ ಈ ಬೆಟ್ಟ ಸೂರ್ಯೋದಯ ಹಾಗೂ ಸೂರ್ಯಾಸ್ಥ ವೀಕ್ಷಣೆಗೆ ಪ್ರಶಸ್ತವಾದ ಸ್ಥಳವಾಗಿದೆ.
  5. ವಂಡರ್‌-ಲಾ: ರಾಮದೇವರ ಬೆಟ್ಟದಿಂದ 21 ಕಿ.ಮೀ. ದೂರದಲ್ಲಿ ಬೆಂಗಳೂರು ಕಡೆಗೆ ಇರುವ ಈ ಸ್ಥಳ ಪ್ರಸಿದ್ದ ಅಮ್ಯೂಸ್‌ ಮೆಂಟ್‌ ಪಾರ್ಕ ಆಗಿದೆ.

ಹತ್ತಿರದ ವಸತಿ ವ್ಯವಸ್ಥೆಗಳ ವಿವರಹೋಂಸ್ಟೇಗಳ ಪಟ್ಟಿ

ಕ್ರ.ಸಂ

ಹೋಂಸ್ಟೇ ಹೆಸರು

ವಿಳಾಸ

ಮೊಬೈಲ್ಸಂಖ್ಯೆ

1

ಕೌಬಾಯ್ಸ್ ಹೋಂ-ಸ್ಟೇ

ಬಾನಂದೂರು ಗ್ರಾಮ, ಬಿಡದಿ ಹೋಬಳಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ.

 

6364453204

2

ರೈತನ ಹಟ್ಟಿ ಹೋಂ-ಸ್ಟೇ

ಪಾಲಾಬೋವಿದೊಡ್ಡಿ ಗ್ರಾಮ, ಕಸಬಾ ಹೋಬಳಿ, ಹರಿಸಂದ್ರ ಗ್ರಾಮಪಂಚಾಯಿತಿ ರಾಮನಗರ ತಾಲ್ಲೂಕು ಮತ್ತು ಜಿಲ್ಲೆ.

 

7483448009

3

ದೇವಧಾಮ ಹೋಂ-ಸ್ಟೇ

ವಡ್ಡರದೊಡ್ಡಿಗ್ರಾಮ, ಶಾನಭೋಗನಹಳ್ಳಿ, ಕೂಟಗಲ್ ಹೋಬಳಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ.

 

9986737388

4

ಧರೆ ಹೋಂ-ಸ್ಟೇ

ಕಲ್ಲುಗೊಪಳ್ಳಿ ಗ್ರಾಮ, ಬಿಡದಿ ಹೋಬಳಿ, ಮುದುವಾಡಿ ರಸ್ತೆ ನಿತ್ಯಾನಂದ ಆಶ್ರಮದ ಹತ್ತಿರ ಕಲ್ಲುಗೊಪಳ್ಳಿ ರಾಮನಗರ ತಾಲ್ಲೂಕು ಮತ್ತು ಜಿಲ್ಲೆ.

 

9008800556

5

ಮೈಮೌಂಟೇನ್ ಬೇರ್ ಹೋಂ-ಸ್ಟೇ

ನೆಲಮನೆ ಗ್ರಾಮ, ಕೈಲಾಂಚ ಹೋಬಳಿ,ಹುಲಿಕೆರೆ ಗುನ್ನೂರು ಗ್ರಾಮ ಪಂಚಾಯಿತಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ.

 

9449813865

6

ಮ್ಯಾಂಗೋಸ್ಕೇಪ್‌ ಹೋಂಸ್ಟೇ

ಕವಣಾಪುರ ಗ್ರಾಮ, ಕೈಲಾಂಚ ಹೋಬಳಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ.

 

9810732367

7

ಅಂಬರ ಕೋವಿಲ್ಕಂ ಹೋಂಸ್ಟೇ

ಸಬ್ಬಕೆರೆ ಗ್ರಾಮ, ಅವೇರಹಳ್ಳಿ ಅಂಚೆ, ಕೈಲಾಂಚ ಹೋಬಳಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ.

 

9742904276

ಹತ್ತಿರದ ರೆಸಾರ್ಟ್ಸ್ಗಳ ಪಟ್ಟಿ

8

ರಾಶಿ ಇಕೋ ಟೂರಿಸಂ (ಶೀಲ್ಹಾಂದ್ರ) ರೆಸಾರ್ಟ್‌

ಹರಿಸಂದ್ರ ಗ್ರಾಮ ಮತ್ತು ಗ್ರಾಮ ಪಂಚಾಯಿತಿ, ಕಸಬಾ ಹೋಬಳಿ, ರಾಮನಗರ ತಾಲ್ಲೂಕು ತ್ತು ಜಿಲ್ಲೆ.

 

9591991001

9

ರಾವಿಶಿಂಗ್‌ ರೀರ್ಟ್ರೀಟ್‌ ರೆಸಾರ್ಟ್

ಹರಿಸಂದ್ರ ಗ್ರಾಮ ಮತ್ತು ಗ್ರಾಮ ಪಂಚಾಯಿತಿ, ಕಸಬಾ ಹೋಬಳಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ.

 

6362900366‌

ಫೋಟೋ ಗ್ಯಾಲರಿ

  • ರಾಮದೇವರಬೆಟ್ಟಾ
  • ರಾಮದೇವರ ಬೆಟ್ಟದ ಮೇಲಿನ ನೋಟ
  • ರಾಮದೇವರ ಬೆಟ್ಟದ ಕಡೆ ನೋಟ

ತಲುಪುವ ಬಗೆ:

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣ - ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ) ದೇವನಹಳ್ಳಿ.

ರೈಲಿನಿಂದ

ಹತ್ತಿರದ ರೈಲು ನಿಲ್ದಾಣ ರಾಮನಗರ ಮತ್ತು ಚನ್ನಪಟ್ಟಣ ನಿಲ್ದಾಣ.

ರಸ್ತೆ ಮೂಲಕ

ರಾಮನಗರದಿಂದ 5 ಕಿ.ಮೀ (ಬೆಂಗಳೂರು-ಮೈಸೂರು ಹೆದ್ದಾರಿ) ದೂರದಲ್ಲಿದೆ.