ಮುಚ್ಚಿ

ಸಂಗಮ:
ರಾಮನಗರದಿಂದ ಸುಮಾರು 60 ಕಿ.ಮೀ. ದೂರದಲ್ಲಿರುವ ಅರ್ಕಾವತಿ ಮತ್ತು ಕಾವೇರಿ ನದಿಗಳು ಸೇರುವ ಸಂಗಮ ಸ್ಥಳವು ಕನಕಪುರದಿಂದ ಸುಮಾರು 30 ಕಿ.ಮೀ. ದೂರದಲ್ಲಿದೆ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಈ ಸ್ಥಳದಲ್ಲಿ ಜಲಕ್ರೀಡೆ, ತೆಪ್ಪಗಳ ವ್ಯವಸ್ಥೆಯನ್ನು ಪ್ರವಾಸಿಗರಿಗಾಗಿ ಒದಗಿಸಲಾಗಿದೆ. ಉತ್ತಮ ರಸ್ತೆ ಸಂಪರ್ಕ ಹೊಂದಿದ್ದು, ಎಲ್ಲಾ ರೀತಿಯ ಮೂಲಸೌಕರ್ಯಗಳು ಹಾಗೂ ವಸತಿ ವ್ಯವಸ್ಥೆಯನ್ನು ಒದಗಿಸಲಾಗಿದೆ.

ಫೋಟೋ ಗ್ಯಾಲರಿ

  • ಅರ್ಕಾವತಿ ನದಿ ಕಾವೇರಿ ನದಿಗೆ ಸೇರುವ ಸ್ಥಳ
  • ಮೇಕೆದಾಟು,ಕನಕಪುರ
  • ಮೇಕೆದಾಟು

ತಲುಪುವ ಬಗೆ:

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣ - ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ) ದೇವನಹಳ್ಳಿ.

ರೈಲಿನಿಂದ

ಹತ್ತಿರದ ರೈಲು ನಿಲ್ದಾಣ- ರಾಮನಗರ ನಿಲ್ದಾಣ.

ರಸ್ತೆ ಮೂಲಕ

ರಾಮನಗರದಿಂದ ಸುಮಾರು 60 ಕಿ.ಮೀ ಮತ್ತು ಕನಕಪುರದಿಂದ ಸುಮಾರು 30 ಕಿ.ಮೀ. ದೂರದಲ್ಲಿದೆ