ಮುಚ್ಚಿ

ಜಾನಪದ ಲೋಕ

ನಿರ್ದೇಶನ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾಮನಗರದಿಂದ 4 ಕಿ.ಮೀ. ದೂರದಲ್ಲಿ ಜಾನಪದ ಲೋಕ ಸಿಗುತ್ತದೆ. ಆಕರ್ಷಕ ಹೆಬ್ಬಾಗಿಲುಳ್ಳ ಜಾನಪದ ಲೋಕ ನಿವೃತ್ತ ಐ.ಎ.ಎಸ್. ಅಧಿಕಾರಿ ಸಾಹಿತಿ ಜಾನಪದ ಬ್ರಹ್ಮ ದಿ.ಎಸ್.ಎಲ್. ನಾಗೇಗೌಡರ ಕನಸಿನ ಸಾಕಾರ ರೂಪ. ಹದಿನೈದು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಜಾನಪದ ಲೋಕದಲ್ಲಿ ವಿಹರಿಸುವುದೇನೆಂದರೆ ಕರ್ನಾಟಕದ ಗ್ರಾಮೀಣ ಸಂಸ್ಕøತಿಯ ಆಳ-ಹರಹುಗಳ ವಿಸ್ಮಯ ಜಗತ್ತನ್ನು ಹೊಕ್ಕಂತೆ ಭಾಸವಾಗುತ್ತದೆ. ಲೋಕಮಾತಾ ಪ್ರದರ್ಶನಾಲಯದ ಮುಂದೆ ನಿಂತಿರುವ ಜಾನಪದ ಲೋಕದ ಶಿಲ್ಪಿ ನಾಡೋಜ ದಿ. ನಾಗೇಗೌಡರ ಭವ್ಯ ಮೂರ್ತಿ ನಮ್ಮನ್ನು ಸ್ವಾಗತಿಸುತ್ತದೆ. ಮೂರ್ತಿಯ ಹಿಂಭಾಗದಲ್ಲಿರುವ ಲೋಕ ಮಾತಾ ವಸ್ತು ಸಂಗ್ರಹಾಲಯದಲ್ಲಿ ಗ್ರಾಮೀಣ ಗೃಹೋಪಯೋಗಿ ವಸ್ತುಗಳ ಸಂಗ್ರಹವನ್ನು ಕಾಣಬಹುದು. ಸುಮಾರು 1500 ಜನಗಳು ಕೂರಬಹುದಾದ ವಿಶಾಲ ಬಯಲು ರಂಗಮಂದಿರವಿದೆ. ಗ್ರೀಸ್‍ನ ಎಪಿಕ್ ರಂಗಮಂದಿರದ ಮಾದರಿಯಲ್ಲಿ ನಿರ್ಮಿಸಿರುವ ಇಲ್ಲಿ ವರ್ಷವಿಡಿ ಅನೇಕ ಸಾಹಿತ್ಯಕ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಜಾನಪದ ಕಲೆಗಳಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರ ಹಾಗೂ ಇನ್ನಿತರ ದೃಶ್ಯ ಪ್ರದರ್ಶನಗಳಿಗಾಗಿ ವಿಡಿಯೋ ಸ್ಕೋಪ್‍ನ ಪ್ರತ್ಯೇಕ ಸಭಾಂಗಣ ಇದೆ. ಲೋಕಮಾತಾ ಮಂದಿರದ ಸಮೀಪದಲ್ಲೇ ಚಿತ್ರಕುಟೀರವಿದೆ. ಲೋಕಮಂದಿರದಲ್ಲಿ ಗ್ರಾಮೀಣ ಕಲೆಗಳ ಮತ್ತು ಕಲಾ ಪ್ರದರ್ಶನಕ್ಕಾಗಿ ಬಳಸುವ ವಾದ್ಯಗಳು ಹಾಗೂ ಹಳ್ಳಿಗರು ಬಳಸುವ ಸರಕು ಸಾಧನಗಳು, ತೊಗಲು ಗೊಂಬೆ, ಯಕ್ಷಗಾನ ಬಯಲಾಟದ ವಿವಿಧ ಗೊಂಬೆಗಳು, ನಾಣ್ಯಗಳು, ಅಳತೆ ಮಾಪಕಗಳು ಇತ್ಯಾದಿಗಳ ಸಂಗ್ರಹವಿದೆ. ಅಯ್ಯಂಗಾರರ ಮಾಳ, ಶಿಲ್ಪ ಮಾಳ, ಕುಂಬಾರಿಕೆ ಹಾಗೂ ಗೊಂಬೆ ತಯಾರಿಕೆಯು ಇಲ್ಲಿನ ಇತರೆ ಆಕರ್ಷಣಿಗಳು. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ, ರೆಸ್ಟೋರೆಂಟ್ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಫೋಟೋ ಗ್ಯಾಲರಿ

  • ಬಯಲುಮಂದಿರ,ಜಾನಪದಲೋಕ
  • ಬೊಂಬೆಯ ರೂಪದಲ್ಲಿರುವ ರಾವಣನ ಪ್ರತಿನಿಧಿ
  • ಹಳೆಯ ಶಸ್ತ್ರಾಸ್ತ್ರಗಳು

ತಲುಪುವ ಬಗೆ:

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣ - ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ) ದೇವನಹಳ್ಳಿ.

ರೈಲಿನಿಂದ

ಹತ್ತಿರದ ರೈಲು ನಿಲ್ದಾಣ ರಾಮನಗರ ಮತ್ತು ಚನ್ನಪಟ್ಟಣ ನಿಲ್ದಾಣ.

ರಸ್ತೆ ಮೂಲಕ

ರಾಮನಗರದಿಂದ 4 ಕಿ.ಮೀ (ಬೆಂಗಳೂರು-ಮೈಸೂರು ಹೆದ್ದಾರಿ) ದೂರದಲ್ಲಿದೆ.