ಮುಚ್ಚಿ

ಇನ್ನೋವೇಟಿವ್ ಫಿಲಂ ಸಿಟಿ

ನಿರ್ದೇಶನ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ 35 ಕಿ.ಮೀ. ದೂರದಲ್ಲಿರುವ ಇನ್ನೋವೇಟಿವ್ ಫಿಲಂ ಸಿಟಿ ಖಾಸಗೀ ಸಂಸ್ಥೆಯಿಂದ ನಿರ್ಮಿಸಲಾದ ಆಧುನಿಕ ಪ್ರವಾಸಿ ತಾಣವಾಗಿದೆ. ಹೈದರಾಬಾದ್‍ನ ರಾಮೋಜಿ ಫಿಲಂ ಸಿಟಿ ಮಾದರಿಯಲ್ಲಿ ಇರುವ ಇಲ್ಲಿ ಅನೇಕ ರಿಯಾಲಿಟಿ ಶೋಗಳ, ಚಲನಚಿತ್ರಗಳ ಹಾಗೂ ಕಿರುತೆರೆಯ ದಾರವಾಹಿಗಳ ಚಿತ್ರೀಕರಣದೊಂದಿಗೆ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳು ವರ್ಷಪೂರ್ತಿ ನಡೆಯುತ್ತಿರುತ್ತವೆ. ಈ ಫಿಲಂ ಸಿಟಿಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಆಹಾರ, ವಸತಿ , ಮೂಲಭೂತ ಸೌಕರ್ಯವನ್ನು ಒದಗಿಸಲಾಗಿದೆ. ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆಯನ್ನು ನೀಡಲಾಗಿದೆ.

ಫೋಟೋ ಗ್ಯಾಲರಿ

  • ಬಿಗ್ ಬಾಸ್ ಹೋಮ್
  • ಇನ್ನೋವೆಟಿವೇ ಫಿಲ್ಮ್ ಸಿಟಿ

ತಲುಪುವ ಬಗೆ:

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣ - ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ) ದೇವನಹಳ್ಳಿ.

ರೈಲಿನಿಂದ

ಹತ್ತಿರದ ರೈಲು ನಿಲ್ದಾಣ ಬಿಡದಿ .

ರಸ್ತೆ ಮೂಲಕ

ರಾಮನಗರದಿಂದ 15 ಕಿ.ಮೀ ಮತ್ತು ಬೆಂಗಳೂರಿನಿಂದ 35 ಕಿ.ಮೀ (ಬೆಂಗಳೂರು-ಮೈಸೂರು ಹೆದ್ದಾರಿ) ದೂರದಲ್ಲಿದೆ.