ರಾಮದೇವರ ಬೆಟ್ಟ
ಪ್ರಕಟಿಸಿದ ದಿನಾಂಕ: 27/07/2018ಬೆಂಗಳೂರಿನಿಂದ 50 ಕಿ.ಮೀ ದೂರದಲ್ಲಿರುವ ರಮಣಗರದಲ್ಲಿ ರಾಮದೇವರ ಬೆಟ್ಟ, ರಾಮನಾಗ್ರಾದಿಂದ 3 ಕಿ.ಮೀ ದೂರದಲ್ಲಿ ಒಂದು ದಿನದ ಪ್ರವಾಸಕ್ಕೆ ಉತ್ತಮ ಸ್ಥಳವಾಗಿದೆ. ನಾವು ಬೆಟ್ಟದ ತಳದಲ್ಲಿ ವಾಹನವನ್ನು ನಿಲ್ಲಿಸಬೇಕು ಮತ್ತು ಬೆಟ್ಟದ ತುದಿಯನ್ನು ತಲುಪಲು ಸುಮಾರು 200 ರಿಂದ 300 ಹಂತಗಳನ್ನು ತಲುಪಬೇಕು. ಕೆಲವು ಸಣ್ಣ ದೇವಾಲಯಗಳು ಮತ್ತು ಒಂದು ಮುಖ್ಯ ದೇವಸ್ಥಾನ ಇರುವ ಮಾರ್ಗದಲ್ಲಿ. ಬೆಟ್ಟದ ಮೇಲಿನಿಂದ ಉತ್ತಮ ನೋಟವಿದೆ. ಈ ಸ್ಥಳವು 5.30 ಪಿ.ಎಂ.ನಿಂದ ಮುಚ್ಚಲ್ಪಡುತ್ತದೆ, ಆದ್ದರಿಂದ ನೀವು ಸಂಜೆ ಯೋಜನೆಯಲ್ಲಿ 4 ರಿಂದ […]
ಇನ್ನಷ್ಟು ವಿವರಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನ
ಪ್ರಕಟಿಸಿದ ದಿನಾಂಕ: 25/07/2018ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನ: ಬೆಂಗಳೂರು-ಮೈಸೂರು ರಸ್ತೆಯಲ್ಲಿ ರಾಮನಗರದಿಂದ 10 ಕಿ.ಮೀ. ದೂರದಲ್ಲಿರುವ ಕೆಂಗಲ್ ಆಂಜುನೇಯ ದೇವಾಲಯ ಪ್ರಕೃತಿ ನಿರ್ಮಿತ ಕೆಂಪು ಶಿಲೆಯಲ್ಲಿರುತ್ತದೆ. ಪ್ರತಿ ಶನಿವಾರ ಧಾರ್ಮಿಕ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳವಾಗಿದ್ದು, ಪ್ರವಾಸಿಗರಿಗಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಕೆಂಗಲ್ ಹನುಮಂತಯ್ಯನವರು ನಿರ್ಮಿಸಿದ ಈ ದೇವಾಲಯವು ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದ್ದು ಹೆಚ್ಚಿನ ಸಂಖ್ಯೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಇನ್ನಷ್ಟು ವಿವರಮಾಗಡಿ ರಂಗನಾಥಸ್ವಾಮಿ ದೇವಸ್ಥಾನ
ಪ್ರಕಟಿಸಿದ ದಿನಾಂಕ: 25/07/2018ಮಾಗಡಿ ರಂಗನಾಥಸ್ವಾಮಿ ದೇವಸ್ಥಾನ: ರಾಮನಗರದಿಂದ 36 ಕಿ.ಮೀ. ದೂರದಲ್ಲಿರುವ ಮಾಗಡಿ ಪಟ್ಟಣದಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯವು ಚೋಳರ ಕಾಲದ ಪ್ರಸಿದ್ಧ ದೇವಾಲಯವಾಗಿದ್ದು, ಶ್ರೀ ರಂಗನಾಥಸ್ವಾಮಿ ವಿಗ್ರಹದÀ ಮುಖ ಪಶ್ಚಿಮ ದಿಕ್ಕಿನಲ್ಲಿದ್ದು, ಉಳಿದ ಎಲ್ಲಾ ವಿಗ್ರಹಗಳ ಪ್ರತಿಮೆಗಳ ಮುಖ ಪೂರ್ವದಿಕ್ಕಿಗಿವೆ. ದೇವಾಲಯದ ಮುಂಭಾಗದಲ್ಲಿ ಪುರಾತನ ಕಾಲದ ಪುಷ್ಕರಣಿ ಇದೆ. ನಿತ್ಯ ದಾಸೋಹವಿರುವ ಈ ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳು ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಇನ್ನಷ್ಟು ವಿವರಸಾವನದುರ್ಗ:
ಪ್ರಕಟಿಸಿದ ದಿನಾಂಕ: 25/07/2018ಸಾವನದುರ್ಗ: ರಾಮನಗರದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಸಾವನದುರ್ಗ ಬೆಟ್ಟವು ಸುಮಾರು 1226 ಮೀಟರ್ ಎತ್ತರದಲ್ಲಿದೆ. ಬೆಟ್ಟದ ಬುಡದಲ್ಲಿ ಸಾವಂದಿ ವೀರಭದ್ರಸ್ವಾಮಿ, ನರಸಿಂಹಸ್ವಾಮಿ ದೇವಸ್ಥಾನಗಳಿವೆ. ಬೆಟ್ಟ ಬಹಳ ಕಡಿದಾಗಿದ್ದು, ಸಾಹಸಿಗಳು ಮಾತ್ರ ಏರಬಹುದಾಗಿದೆ. ದೇವಾಲಯಗಳ ಸಮುಚ್ಛಯವಿದೆ. ಇಲ್ಲಿರುವ ಸೋಮೇಶ್ವರ ಲಿಂಗವು ಮೂರು ಅಡಿ ಎತ್ತರವಿದ್ದು, ದ್ವಾರ ಕಂಬ ಮತ್ತು ನೃತ್ಯ ಮಂಟಪಗಳಲ್ಲಿ ಸುಂದರ ಚಿತ್ರಗಳಿವೆ. ಇದೊಂದು ಐತಿಹಾಸಿಕ ಸ್ಥಳವಾಗಿದ್ದು. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ.
ಇನ್ನಷ್ಟು ವಿವರಶ್ರೀ ರೇವಣ್ಣ ಸಿದ್ದೇಶ್ವರ ಬೆಟ್ಟ
ಪ್ರಕಟಿಸಿದ ದಿನಾಂಕ: 25/07/2018ಶ್ರೀ ರೇವಣ್ಣ ಸಿದ್ದೇಶ್ವರ ಬೆಟ್ಟ ರಾಮನಗರದಿಂದ ಕನಕಪುರ ಕಡೆಗೆ ಹೋಗುವ ರಸ್ತೆಯಲ್ಲಿ 15 ಕಿ.ಮೀ. ದೂರ ಕ್ರಮಿಸಿದರೆ ಪವಿತ್ರ ಯಾತ್ರಾಸ್ಥಳ ರೇವಣ್ಣ ಸಿದ್ದೇಶ್ವರನ ಬೆಟ್ಟ ಸಿಗುತ್ತದೆ. ರೇವಣ್ಣ ಸಿದ್ದೇಶ್ವರ ಬೆಟ್ಟವು ಅನೇಕ ವಿಶಿಷ್ಟತೆಗಳಿಂದ ಕೂಡಿದೆ. ಏಕಶಿಲಾ ಗಿರಿಯಾದ ಇದು ಅತ್ಯಂತ ಕಡಿದಾಗಿದ್ದರೂ ಏರುವುದಕ್ಕೆ ಮೆಟ್ಟಿಲುಗಳಿವೆ. ಭಕ್ತಿ ಮತ್ತು ಸಾಹಸ ಎರಡೂ ಏಕೀಭವಿಸುವುದರಿಂದ ಬೆಟ್ಟ ಹತ್ತುವುದು ವಿಶಿಷ್ಟವಾದ ಅನುಭವವನ್ನು ನೀಡುತ್ತದೆ. ಬೆಟ್ಟದ ತಪ್ಪಲನ್ನು ಸಮೀಪಿಸುತ್ತಿದ್ದಂತೆಯೇ ಸುಂದರ ಉದ್ಯಾನವನದ ನಡುವೆ ರೇವಣ್ಣ ಸಿದ್ದೇಶ್ವರನ ತಂಗಿಯಾದ ರೇಣುಕಾಂಬೆಯ ದೇವಾಲಯವಿದೆ. ನಿತ್ಯ ದಾಸೋಹ […]
ಇನ್ನಷ್ಟು ವಿವರಕಬ್ಬಾಳು ಬೆಟ್ಟ
ಪ್ರಕಟಿಸಿದ ದಿನಾಂಕ: 25/07/2018ಕಬ್ಬಾಳು ಬೆಟ್ಟ: ರಾಮನಗರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಕಬ್ಬಾಳು ಬೆಟ್ಟ (ಕಬ್ಬಾಳಮ್ಮ ದೇವಾಲಯ) ಕನಕಪುರದಿಂದ 10 ಕಿ.ಮೀ. ದೂರದಲ್ಲಿದೆ. 1300 ಮೀಟರ್ ಎತ್ತರದಲ್ಲಿರುವ ಈ ಬೆಟ್ಟವು ತುಂಬಾ ಕಡಿದಾಗಿದ್ದು, ಪುರಾತನ ಕೋಟೆ ಇರುತ್ತದೆ. ಹಿಂದೆ ಈ ಕೋಟೆಯಲ್ಲಿ ಅಪರಾಧಿಗಳನ್ನು ಬಂಧಿಸಿಡುತ್ತಿದ್ದರು. ಕಬ್ಬಾಳಮ್ಮ ದೇವಿಯ ಸುಂದರವಾದ ದೇವಾಲಯವಿದ್ದು, ತುಂಬಾ ಆಕರ್ಷಕವಾದ ಕಬ್ಬಾಳಮ್ಮ ವಿಗ್ರಹವಿದೆ. ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಮೂಲಭೂತ ಸೌಕರ್ಯಗಳು ಹಾಗೂ ವಸತಿ ವ್ಯವಸ್ಥೆಯನ್ನು ಒದಗಿಸಲಾಗಿದೆ. ಮಂಗಳವಾರ, ಶುಕ್ರವಾರ, ಹುಣ್ಣಿಮೆ, ಅಮಾವಾಸ್ಯೆಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದು, […]
ಇನ್ನಷ್ಟು ವಿವರ