ಮುಚ್ಚಿ

ಉಪವಿಭಾಗಾಧಿಕಾರಿಗಳ ಕಛೇರಿ

ಹೆಸರು ಹುದ್ದೆ ಮೊಬೈಲ್ ನಂ. ದೂರವಾಣಿ ಸಂಖ್ಯೆ ವಿಳಾಸ
ದಾಕ್ಷಾಯಣಿ,ಕೆ.ಎ.ಎಸ್ ಉಪವಿಭಾಗಾಧಿಕಾರಿ ಹಾಗೂ ಉಪ ವಿಭಾಗೀಯ ದಂಡಾಧಿಕಾರಿ, ರಾಮನಗರ ಉಪವಿಭಾಗ. 9480783686 080-27271229 ಉಪವಿಭಾಗಾಧಿಕಾರಿಗಳ ಕಛೇರಿ,1ನೇ ಮಹಡಿ, ಮಿನಿವಿಧಾನಸೌಧ,ಬಿ.ಎಂ. ರಸ್ತೆ, ರಾಮನಗರ – 562159.

 

ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಉಪವಿಭಾಗಾಧಿಕಾರಿಗಳು (ಸಹಾಯಕ ಆಯುಕ್ತರು) ಜಿಲ್ಲೆಯ ನಿಗದಿತ ತಾಲ್ಲೂಕುಗಳ ಉಸ್ತುವಾರಿ ವಹಿಸುತ್ತಾರೆ. ಅವರು ಉಪ-ವಿಭಾಗೀಯ ದಂಡಾಧಿಕಾರಿ ಸಹ ಆಗಿರುತ್ತಾರೆ. ಕಂದಾಯದ ವಿಷಯಗಳ ಬಗ್ಗೆ ತಹಶೀಲ್ದಾರ್ ಗಳು ಉಪವಿಭಾಗಾಧಿಕಾರಿಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಗೆ ಒಳಪಟ್ಟಿರುತ್ತಾರೆ. ಉಪವಿಭಾಗಗಳ ಉಸ್ತುವಾರಿ ವಹಿಸಿರುವ ಉಪವಿಭಾಗಾಧಿಕಾರಿಗಳು ಜಿಲ್ಲಾಧಿಕಾರಿಯ ಅಧಿಕಾರಗಳನ್ನು ಕರ್ನಾಟಕದ ಭೂ ಕಂದಾಯ ಕಾಯ್ದೆ, 1964 ಮತ್ತು ಇತರ ರಾಜ್ಯ ಕಾನೂನುಗಳ ಹಲವು ವಿಭಾಗಗಳಡಿಯಲ್ಲಿ ನಿಯೋಜಿಸಲಾಗಿದೆ. ಉಪವಿಭಾಗಾಧಿಕಾರಿಯು ತನ್ನ ಅಧೀನ ಆದೇಶಗಳನ್ನು ನಿರ್ವಹಿಸುವ ಕಂದಾಯದ ವಿಷಯಗಳ ವಿಷಯದಲ್ಲಿ ಮೊದಲ ಮೇಲ್ಮನವಿ ಪ್ರಾಧಿಕಾರ ಮತ್ತು ಕರ್ನಾಟಕ ಭೂ ಕಂದಾಯ ಕಾಯಿದೆ, 1964 ರ ಸೆಕ್ಷನ್ 56 ರ ಪರಿಷ್ಕರಣೆ ಅಧಿಕಾರವನ್ನು ಹೊಂದಿರುತ್ತಾರೆ. ತನ್ನ ಉಪವಿಭಾಗಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ ಕೆಲಸವನ್ನು ನಿರ್ವಹಿಸುತ್ತಾರೆ ಮತ್ತು 1961 ರ ಕರ್ನಾಟಕ ಭೂ ಸುಧಾರಣೆ ಕಾಯಿದೆ ಅಡಿಯಲ್ಲಿ ಸ್ಥಾಪಿಸಲ್ಪಟ್ಟ ಟ್ರಿಬ್ಯೂನಲ್ ಅಧ್ಯಕ್ಷರಾಗಿರುತ್ತಾರೆ, ಉಪವಿಭಾಗಾಧಿಕಾರಿಗಳು ತಮ್ಮ ಉಪ ವಿಭಾಗದ ವಿಧಾನಸಭಾ ಕ್ಷೇತ್ರಗಳಿಗೆ ಮತದಾರರ ನೋಂದಣಾಧಿಕಾರಿ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸಹ ಆಗಿರುತ್ತಾರೆ.

ವಿವಿಧ ರಾಜ್ಯ ಕಾಯಿದೆಗಳ ಅಡಿಯಲ್ಲಿ ಉಪವಿಭಾಗಾಧಿಕಾರಿಗಳ ಕರ್ತವ್ಯಗಳು.

  • ಕರ್ನಾಟಕ ನೀರಾವರಿ ನಿಯಮಗಳು 1965 ರ ವಿಧಿಯನ್ವಯ ನೀರು ದರಗಳು ಮತ್ತು ಸೆಸ್
  • ಕರ್ನಾಟಕ ಸ್ಟ್ಯಾಂಪ್ ಆಕ್ಟ್ 1957 ಮತ್ತು ರೂಲ್ಸ್ 1958.
  • ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಕೆಲವು ಭೂಮಿಗಳ ವರ್ಗಾವಣೆ ನಿಷೇಧ) ಕಾಯಿದೆ 1978 ರೂಲ್ಸ್ 1979.
  • ಕರ್ನಾಟಕ ಅರಣ್ಯ ಕಾಯಿದೆ 1963 ಮತ್ತು ನಿಯಮಗಳು 1969.
  • ಕರ್ನಾಟಕ ಭೂ ಸುಧಾರಣಾ ಕಾಯಿದೆ 1961 ಮತ್ತು ನಿಯಮಗಳು.
  • ಕರ್ನಾಟಕ ಮುನಿಸಿಪಾಲಿಟಿ ಕಾಯಿದೆ 1964.
  • ಕರ್ನಾಟಕ ಭೂ ಕಂದಾಯ ಕಾಯಿದೆ 1964 ಮತ್ತು ನಿಯಮಗಳು 1966.
  • ಕರ್ನಾಟಕ ಮೋಟಾರ್ ವಾಹನ ನಿಯಮಗಳು 1963.
  • ಕರ್ನಾಟಕ ಇನಾಂ ನಿರ್ಮೂಲನೆ ಕಾಯಿದೆಗಳು.
  • ಕರ್ನಾಟಕ ಲ್ಯಾಂಡ್ ಗ್ರಾಂಟ್ ರೂಲ್ 1969
  • ಜಮೀನು ಸ್ವಾಧೀನ ಕಾಯಿದೆ 1984
  • ಕರ್ನಾಟಕ ಹೌಸ್ ಸೈಟ್ ಸ್ವಾಧೀನ ಕಾಯಿದೆ 1972
  • ಚುನಾವಣಾ ನೋಂದಣಿ ನಿಯಮಗಳು 1960