ಭೂಮಿ ಸೇವೆಗಳು
ಭೂಮಿ – ಸಮಗ್ರ ಭೂದಾಖಲೆಗಳ ನಿರ್ವಹಣೆಯ ಗಣಕ ವ್ಯವಸ್ಥೆ
ಭೂಮಿ ಯೋಜನೆಯು ಕರ್ನಾಟಕ ರಾಜ್ಯ ಸರ್ಕಾರದ ಭೂದಾಖಲೆಗಳ ನಿರ್ವಹಣೆಯ ಒಂದು ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯನ್ನು 2000ನೇ ಇಸವಿಯಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆ ಯಡಿಯಲ್ಲಿ, ಎಲ್ಲಾ ಕೈಬರಹದ ಪಹಣಿಗಳನ್ನು ಡಾಟಾ ನಮೂದಿಸುವ ಮುಖಾಂತರ ಗಣಕೀಕರಣಗೊಳಿಸಿ ಗಣಕೀಕೃತ ಪಹಣಿಗಳನ್ನು ಕಿಯಾಸ್ಕ್ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ವಿತರಿಸಲು ಪ್ರಾರಂಭಿಸಲಾಯಿತು. ಭೂದಾಖಲೆಗಳ ದತ್ತಾಂಶವನ್ನು ಉಪಯೋಗಿಸಿ ಪಹಣಿ ಯಲ್ಲಾಗುವ ಮಾಲೀಕತ್ವ ಬದಲಾವಣೆ ಅಥವಾ ಇನ್ಯಾವುದೇ ಬದಲಾವಣೆಗಳನ್ನು ಕೆ ಎಲ್ ಆರ್ ಕಾಯ್ದೆ ಪ್ರಕಾರ ಮ್ಯುಟೇಶನ್ ಮುಖಾಂತರ ನಿರ್ವಹಿಸಲು ಸಹಾ ಪ್ರಾರಂಭಿಸಲಾಯಿತು. ಇದಕ್ಕಾಗಿ ರಾಜ್ಯದ ಎಲ್ಲಾ 176 ತಾಲ್ಲೂಕುಗಳು, 1 ಹೆಚ್ಚುವರಿ ತಾಲ್ಲೂಕು ಹಾಗೂ 26 ವಿಶೇಷ ತಾಲ್ಲೂಕುಗಳಲ್ಲಿ ಭೂಮಿ ಬ್ಯಾಕ್ ಆಫೀಸ್ ಗಳನ್ನು ಸ್ಥಾಪಿಸಲಾಗಿದೆ.ಪ್ರತಿಯೊಂದು ಬ್ಯಾಕ್ ಆಫೀಸ್ ನಲ್ಲಿ ಎಲ್ ಆರ್ ಕಿಯಾಸ್ಕ್ ಹಾಗೂ ಅರ್ಜಿ ಕಿಯಾಸ್ಕ್ ಕೌಂಟರ್ ಗಳನ್ನು ಸಹ ಸ್ಥಾಪಿಸಲಾಗಿದೆ.
ಭೇಟಿ: https://landrecords.karnataka.gov.in
ಜಿಲ್ಲಾ ಕಚೇರಿ ಸಂಕೀರ್ಣ
ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ಕಛೇರಿಗಳ ಸಂಕೀರ್ಣ, ಬಿ.ಎಂ.ರಸ್ತೆ, ರಾಮನಗರ
ಸ್ಥಳ : ಜಿಲ್ಲಾ ಕಚೇರಿ ಸಂಕೀರ್ಣ | ನಗರ : ರಾಮನಗರ | ಪಿನ್ ಕೋಡ್ : 562159