ಮುಚ್ಚಿ

ಶ್ರೀ ರೇವಣ್ಣ ಸಿದ್ದೇಶ್ವರ ಬೆಟ್ಟ

ಪ್ರಕಟಣೆಯ ದಿನಾಂಕ : 25/07/2018
ರೆವಣ ಸಿದ್ದೇಶ್ವರ ದೇವಾಲಯ

ಶ್ರೀ ರೇವಣ್ಣ ಸಿದ್ದೇಶ್ವರ ಬೆಟ್ಟ
ರಾಮನಗರದಿಂದ ಕನಕಪುರ ಕಡೆಗೆ ಹೋಗುವ ರಸ್ತೆಯಲ್ಲಿ 15 ಕಿ.ಮೀ. ದೂರ ಕ್ರಮಿಸಿದರೆ ಪವಿತ್ರ ಯಾತ್ರಾಸ್ಥಳ ರೇವಣ್ಣ ಸಿದ್ದೇಶ್ವರನ ಬೆಟ್ಟ ಸಿಗುತ್ತದೆ. ರೇವಣ್ಣ ಸಿದ್ದೇಶ್ವರ ಬೆಟ್ಟವು ಅನೇಕ ವಿಶಿಷ್ಟತೆಗಳಿಂದ ಕೂಡಿದೆ. ಏಕಶಿಲಾ ಗಿರಿಯಾದ ಇದು ಅತ್ಯಂತ ಕಡಿದಾಗಿದ್ದರೂ ಏರುವುದಕ್ಕೆ ಮೆಟ್ಟಿಲುಗಳಿವೆ. ಭಕ್ತಿ ಮತ್ತು ಸಾಹಸ ಎರಡೂ ಏಕೀಭವಿಸುವುದರಿಂದ ಬೆಟ್ಟ ಹತ್ತುವುದು ವಿಶಿಷ್ಟವಾದ ಅನುಭವವನ್ನು ನೀಡುತ್ತದೆ. ಬೆಟ್ಟದ ತಪ್ಪಲನ್ನು ಸಮೀಪಿಸುತ್ತಿದ್ದಂತೆಯೇ ಸುಂದರ ಉದ್ಯಾನವನದ ನಡುವೆ ರೇವಣ್ಣ ಸಿದ್ದೇಶ್ವರನ ತಂಗಿಯಾದ ರೇಣುಕಾಂಬೆಯ ದೇವಾಲಯವಿದೆ. ನಿತ್ಯ ದಾಸೋಹ ಮಾಡುತ್ತಿರುವ ಬಯಲು ಪ್ರದೇಶವಿದ್ದು, ಪ್ರಕೃತಿ ವೀಕ್ಷಣೆಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ವಿಶೇಷ ಉತ್ಸವಗಳು, ಪೂಜೆ ನಡೆಯುತ್ತದೆ.