ಸಾವನದುರ್ಗ:
ಪ್ರಕಟಣೆಯ ದಿನಾಂಕ : 25/07/2018

ಸಾವನದುರ್ಗ:
ರಾಮನಗರದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಸಾವನದುರ್ಗ ಬೆಟ್ಟವು ಸುಮಾರು 1226 ಮೀಟರ್ ಎತ್ತರದಲ್ಲಿದೆ. ಬೆಟ್ಟದ ಬುಡದಲ್ಲಿ ಸಾವಂದಿ ವೀರಭದ್ರಸ್ವಾಮಿ, ನರಸಿಂಹಸ್ವಾಮಿ ದೇವಸ್ಥಾನಗಳಿವೆ. ಬೆಟ್ಟ ಬಹಳ ಕಡಿದಾಗಿದ್ದು, ಸಾಹಸಿಗಳು ಮಾತ್ರ ಏರಬಹುದಾಗಿದೆ. ದೇವಾಲಯಗಳ ಸಮುಚ್ಛಯವಿದೆ. ಇಲ್ಲಿರುವ ಸೋಮೇಶ್ವರ ಲಿಂಗವು ಮೂರು ಅಡಿ ಎತ್ತರವಿದ್ದು, ದ್ವಾರ ಕಂಬ ಮತ್ತು ನೃತ್ಯ ಮಂಟಪಗಳಲ್ಲಿ ಸುಂದರ ಚಿತ್ರಗಳಿವೆ. ಇದೊಂದು ಐತಿಹಾಸಿಕ ಸ್ಥಳವಾಗಿದ್ದು. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ.