ಮುಚ್ಚಿ

ಸಾರ್ವಜನಿಕ ಶಿಕ್ಷಣ ಇಲಾಖೆ

ಇಲಾಖೆಯ ಪರಿಚಯ:
                ಭಾರತ ಸರ್ಕಾರವು ವಿದ್ಯಾರ್ಥಿಗಳಿಗೆ ಸುಲಭವಾಗಿ ಶೈಕ್ಷಣಿಕ ಅವಕಾಶ ಕಲ್ಪಿಸಲು ಪ್ರತಿ ಕಿಲೋ ಮೀಟರ್‍ಗೆ ಒಂದು ಪ್ರಾಥಮಿಕ, ಪ್ರತಿ 3 ಕಿಲೋ ಮೀಟರ್‍ಗೆ ಒಂದು ಹಿರಿಯ ಪ್ರಾಥಮಿಕ ಮತ್ತು ಪ್ರತಿ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಒಂದು ಪ್ರೌಢಶಾಲೆಯನ್ನು ತೆರೆಯಲು ಅವಕಾಶ ನೀಡಿದೆ. ಈ ದಿಶೆಯಲ್ಲಿ ಇತ್ತೀಚಿನ ಕಾರ್ಯಕ್ರಮ ಸಮಗ್ರ ಶಿಕ್ಷಣದ ಅಭಿಯಾನದ ಆಶಯದಂತೆ 6 ರಿಂದ 14 ವಯೋಮಾನದ ಎಲ್ಲಾ ಮಕ್ಕಳು ಶೇಕಡಾ 100 ರಷ್ಟು ಶಾಲೆಗೆ ದಾಖಲಾಗಬೇಕು. ಶಾಲೆಗೆ ದಾಖಲಾದ ಎಲ್ಲಾ ಮಕ್ಕಳೂ ಶಾಲೆಗೆ ಹಾಜರಾಗಿ ಉಳಿಯುವಂತಾಗಬೇಕು. ಗುಣಮಟ್ಟ ಶಿಕ್ಷಣದ ಅವಕಾಶದ ಮೂಲಕ ಪ್ರತೀ ಮಗುವೂ ತನ್ನನ್ನು ಕಲಿಕೆಯ ಕನಿಷ್ಠ ಮಟ್ಟ (ಎಂ.ಎಲ್.ಎಲ್.) ವನ್ನು ಸಾಧಿಸುವಂತೆ ಮಾಡುವುದು ಮತ್ತು ಭೌತಿಕ ಕಟ್ಟಡ, ಮೂಲಭೂತ ಅವಶ್ಯಕತೆಗಳಾದ ಕುಡಿಯುವ ನೀರು ಮತ್ತು ಶೌಚಾಲಯಗಳು, ಶಿಕ್ಷಕರ ತರಬೇತಿ ಮತ್ತು ವಿದ್ಯಾರ್ಥಿಗಳು ಶಿಕ್ಷಕರ ನಡುವಿನ ಅನುಪಾತ ಇವುಗಳಲ್ಲಿ ಗಮನಾರ್ಹ ಸುಧಾರಣೆ ತರುವುದು.
ರಾಮನಗರ ಜಿಲ್ಲೆಯಲ್ಲಿ ಒಟ್ಟು 2305 ಜನವಸತಿ ಪ್ರದೇಶಗಳಿದ್ದು, ಅವುಗಳಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳನ್ನೊಳಗೊಂಡಂತೆ ಒಟ್ಟು 821 ಕಿರಿಯ ಪ್ರಾಥಮಿಕ ಶಾಲೆಗಳು, 565 ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು 328 ಪ್ರೌಢಶಾಲೆಗಳು ಹಾಗೂ 01 ಕೇಂದ್ರೀಯ ವಿದ್ಯಾಲಯ ಶಾಲೆ, 01 ಜವಾಹರ್ ನವೋದಯ ಶಾಲೆ ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 1716 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.
 
ಧ್ಯೇಯ ಮತ್ತು ಉದ್ದೇಶಗಳು:
               ನಮ್ಮ ಜಿಲ್ಲೆಯ ಎಲ್ಲಾ ಮಕ್ಕಳನ್ನು ಉತ್ತಮ ಪ್ರಜೆಗಳಾಗಲು, ಸಾಮಾಜಿಕವಾಗಿ ಜವಾಬ್ದಾರಿಯುತ ನಾಗರಿಕರಾಗಲು ಮತ್ತು ಅವರು ಏನೇ ಶ್ರೇಷ್ಠತೆಯನ್ನು ಸಾಧಿಸಲು ಸಕ್ರಿಯಗೊಳಿಸಲು ಮತ್ತು ರಚನಾತ್ಮಕರಾಗಲು ಅವಶ್ಯವಾಗಿ ಬೇಕಾದ ನಿಗದಿತ ಜ್ಞಾನ, ಕೌಶಲ್ಯಗಳು, ಶಿಸ್ತು ಮತ್ತು ಮೌಲ್ಯಗಳನ್ನು ಹೊಂದಲು ಸಜ್ಜುಗೊಳಿಸುವುದೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಮುಖ ಗುರಿಯಾಗಿದೆ.
 
ಯೋಜನೆ ಮತ್ತು ಕಾರ್ಯಕ್ರಮಗಳು:
1. ಶಾಲೆಯಿಂದ ಹೊರಗುಳಿದ ಮಕ್ಕಳು (ಒ.ಒ.ಎಸ್.ಸಿ) :
           ಔಪಚಾರಿಕ ಶಾಲಾ ಶಿಕ್ಷಣ ವ್ಯವಸ್ಥೆಯಿಂದ ನಾನಾ ಕಾರಣಗಳಿಂದ ಶಿಕ್ಷಣ ವಂಚಿತರಾಗುವ 6 ರಿಂದ 14 ವರ್ಷ ವಯೋಮಾನದ ಮಕ್ಕಳನ್ನು ಶಾಲೆಯಿಂದ ಹೊರಗುಳಿದ ಮಕ್ಕಳು ಎನ್ನಬಹುದು. ಇತ್ತೀಚೆಗೆ ಇಲಾಖೆಯ ನಿರ್ದೇಶನದ ಪ್ರಕಾರ ಸತತವಾಗಿ ಏಳು ದಿನಗಳಿಗಿಂತ ಹೆಚ್ಚು ಗೈರು ಹಾಜರಾಗುವ ಮಕ್ಕಳನ್ನು ಸಹ ಶಾಲೆಯಿಂದ ಹೊರಗುಳಿದ ಮಕ್ಕಳು ಎಂದು ಪರಿಗಣಿಸಲು ಸೂಚಿಸಿದೆ.
2019-20ನೇ ಸಾಲಿನ ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಗತಿ ವಿವರ
ಕ್ರ.
ಸಂ
ತಾಲ್ಲೂಕಿನ ಹೆಸರು
ಗುರುತಿಸಲಾದ ಮಕ್ಕಳ ಸಂಖ್ಯೆ
 
ಮುಖ್ಯವಾಹಿನಿಗೆ ಬಂದ ಮಕ್ಕಳ ಸಂಖ್ಯೆ 
ಬಾಕಿ ಉಳಿದ ಮಕ್ಕಳ ಸಂಖ್ಯೆ
1
2
3
4
5
1
ಚನ್ನಪಟ್ಟಣ
129
96
33
2
ಕನಕಪುರ
149
58
91
3
ಮಾಗಡಿ
25
8
17
4
ರಾಮನಗರ
196
121
75
Total
499
283
216
2019-20ನೇ ಸಾಲಿನಲ್ಲಿ 6-13+ ವಯೋಮಾನ ಹೊಂದಿರುವ ಶಾಲೆಯಿಂದ ಹೊರಗುಳಿದ ಮಕ್ಕಳ ಹಾಗೂ ಮುಖ್ಯವಾಹಿನಿಗೆ ಬರದ ಮಕ್ಕಳ ವಿವರ
ಸಮಗ್ರ ಶಿಕ್ಷಣ ಕರ್ನಾಟಕ, ರಾಮನಗರ ಜಿಲ್ಲೆ, ರಾಮನಗರ
2019-20ನೇ ಸಾಲಿನಲ್ಲಿ 6 ರಿಂದ 14 ವರ್ಷ ಶಾಲೆಯಿಂದ ಹೊರಗುಳಿದ ಮಕ್ಕಳ ವಿವರಗಳು
ಕ್ರ. ಸಂ.
 ಶಾಲೆಯಿಂದ ಹೊರಗುಳಿದ ಮಕ್ಕಳ ಕಾರಣವಾರು
ಮುಖ್ಯವಾಹಿನಿಗೆ ಬಾರದ ಮಕ್ಕಳ ಸಂಖ್ಯೆ
ಚನ್ನಪಟ್ಟಣ    ಒಟ್ಟು
ಕನಕಪುರ
ಮಾಗಡಿ
ರಾಮನಗರ
ಒಟ್ಟು
1
ಮಕ್ಕಳು ನಿರಾಸಕ್ತಿ
4
8
12
2
ಮರಣ
2
1
4
7
3
ಇತರ ಗಳಿಕೆಯಲ್ಲಿ ತೊಡಗಿದವರು
1
1
4
ಕುಟುಂಬ ವಿವಾದ
1
1
2
5
ಮನೆ ಕೆಲಸ
8
1
9
6
ವಲಸೆ
32
45
14
49
140
7
ಅಲೆಮಾರಿಗಳು
1
1
8
ಪೋಷಕರ
ನಿರಾಸಕ್ತಿ
23
1
4
28
9
ಪ್ರೌಢವಸ್ಥೆ
1
1
10
ನಕಲು
4
7
11
11
ಮಾಹಿತಿ ಇಲ್ಲ
3
3
12
ಸಿಡಬ್ಲ್ಯೂಎಸ್ಎನ್ (ಎಮ್ಆರ್)
1
1
13
ಮದರಸಾ
15
0
Total
33
91
17
90
216
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಶಾಲೆಯಿಂದ ಹೊಗುಳಿದ ಮಕ್ಕಳನ್ನು ಮುಖ್ಯ ಕಾರ್ಯವಾಹಿನಿಗೆ ತರಲು ಕೈಗೊಂಡ ಕಾರ್ಯ-ತಂತ್ರಗಳು.
1.ಬೆಂಗಳೂರು ದಕ್ಷಿಣ ಜಿಲ್ಲೆಯ ಎಲ್ಲಾ ಮಕ್ಕಳು ಶಾಲೆಯಲ್ಲಿಯೇ ಉಳಿಯುವಂತೆ ಶಾಲಾ ಹಂತದಲ್ಲಿ ಪೋಷಕರ ಸಭೆ, ತಾಯಂದಿರ ಸಭೆಗಳ ಮೂಲಕ ಅರಿವು ಮೂಡಿಸುವ ಕ್ರಮವನ್ನು ಕೈಗೊಳ್ಳಲಾಗಿದೆ.
2. ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯ ಮೂಲಕ ಪುನಃ ಶಾಲೆಗೆ ದಾಖಲಿಸಲು ಕ್ರಮಗಳನ್ನು ಅನುಸರಿಸಲಾಗುತ್ತಿದೆ.
3. ಮುಖ್ಯ ಶಿಕ್ಷಕರು, ಸಹಶಿಕ್ಷಕರು ಮತ್ತು ಸಿ.ಆರ್.ಪಿ ಗಳುಮನೆ ಮನೆ ಭೇಟಿ ಮಾಡಿಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ಮಾಡಲಾಗಿದೆ.
4. ಸಮೀಕ್ಷೆಯ ನಂತರ ಹೋಬಳಿಗೊಬ್ಬರಂತೆ (ಇ.ಸಿ.ಓ/ಬಿ.ಆರ್.ಪಿ) ಹಾಜರಾತಿ ಪ್ರಾಧಿಕಾರಿಗಳನ್ನು ನೇಮಿಸಲಾಗಿದೆ.
5. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಪ್ರತಿ ವಾರದ ಮಾಹಿತಿಯಲ್ಲಿ ಇಲಾಖೆಗೆ ಕಳುಹಿಸಿ ನಂತರ ಸಂಬಂಧಪಟ್ಟ ಇ.ಸಿ.ಓ.ಗಳು, ಓ.ಓ.ಎಸ್.ಸಿ.ಯ ವಿದ್ಯಾರ್ಥಿಯ ಪೋಷಕರಿಗೆ ನಮೂನೆ 5 ರಲ್ಲಿ ನೋಟೀಸ್
6. ನೀಡಿ ನಮೂನೆ 6 ರಲ್ಲಿ ಸ್ವೀಕೃತಿಯನ್ನು ಪಡೆದು ಪೋಷಕರು ಮತ್ತು ವಿದ್ಯಾರ್ಥಿಯ ಮನವೊಲಿಸಿ, ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಿ ಮುಖ್ಯವಾಹಿನಿಗೆ ತರಲಾಗುತ್ತಿದೆ.
7. ಇಲಾಖೆಯ ಕ್ರಮಗಳು, ಮುಖ್ಯ ಶಿಕ್ಷಕರ ಮತ್ತು ಸಿ.ಆರ್.ಪಿ ಗಳಿಂದÀ ಮನೆ ಭೇಟಿ.
8. ಸರ್ಕಾರದ ಪ್ರೋತ್ಸಾಹದಾಯಕ ಯೋಜನೆಗಳನ್ನು ವಿದ್ಯಾರ್ಥಿ ಮತ್ತು ಪೋಷಕರಿಗೆ ತಿಳಿಸಿ ಅವುಗಳ ಸಂಪೂರ್ಣ ಉಪಯೋಗ ಪಡೆಯುವಂತೆ ಮಾಡುವುದು ಹಾಗೂ ಹಲವಾರು ಸಾಧಕರ ಜೀವನ ಚರಿತ್ರೆಯನ್ನು ಹೇಳಿ ಅವರ ಮನಃಪರಿವರ್ತನೆಯನ್ನು ಮಾಡಿ ಮುಖ್ಯ ವಾಹಿನಿಗೆ ತರಲಾಗುತ್ತಿದೆ.
9. ಶಾಲಾಧಾರಿತ ತರಬೇತಿ ಆಯಾ ಶಾಲೆಗಳಲ್ಲಿ ಈ ಮಕ್ಕಳಿಗೆ ವಿಶೇಷ ಸಂತಸದಾಯಕ ಕಲಿಕಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
10. ವಸತಿ ನಿಲಯಗಳಿಗೆ ಸೇರಿಸುವುದು: ಆರ್ಥಿಕವಾಗಿ ಹಿಂದುಳಿದು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮೊರಾರ್ಜಿ ವಸತಿ ನಿಲಯ, ಕಸ್ತೂರಿಬಾ ವಸತಿ ನಿಲಯ, ಹಿಂದುಳಿದ ವರ್ಗಗಳ ಕಲ್ಯಾಣ ವಸತಿ ನಿಲಯಗಳಿಗೆ ದಾಖಲಿಸಲಾಗುವುದು.
11. ಮಕ್ಕಳ ಕಲ್ಯಾಣ ಸಮಿತಿಯಿಂದ ಪೋಷಕರಿಗೆ ಅಗತ್ಯ ಕ್ರಮಗಳು.
12. ಮಕ್ಕಳಿಗೆ ಆಪ್ತ ಸಮಾಲೋಚನೆ ಮಾಡಿ ಶಾಲೆಗಳಿಗೆ ಕರೆತರುವುದು.
13. ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಎಸ್.ಡಿ.ಎಂ.ಸಿ ಸದಸ್ಯರು, ರೋಟರಿ ಸಂಸ್ಥೆ, ಲಯನ್ಸ್ ಕ್ಲಬ್ ಮುಂತಾದ ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆಯಲಾಗುವುದು.
                                                                               ಒ.ಒ.ಎಸ್.ಸಿ ಸಂಬಂಧ ಬಿ.ಆರ್.ಸಿ ಸಭೆಒ.ಒ.ಎಸ್.ಸಿ ಮಕ್ಕಳಿರುವ ಸ್ಥಳ ಸಮೀಕ್ಷೆ, ರಾಮನಗರ
2. ಆರ್.ಟಿ.ಇ.:
                  ಶಿಕ್ಷಣ ಹಕ್ಕು ಕಾಯ್ದೆಯು ಭಾರತೀಯ ಸಂವಿಧಾನ ಆರ್ಟಿಕಲ್ 21(ಎ) ಅಡಯಲ್ಲಿ 6 ರಿಂದ 14 ವರ್ಷ ವಯಸ್ಸಿನ ಪ್ರತಿ ಮಗುವಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಉದ್ದೇಶದಿಮದ ಏಪ್ರೀಲ್-01, 2010ರಂದು ಜಾರಿಗೆ ತರಲಾಯಿತು. 21(ಎ) ವಿಧಿಯಲ್ಲಿ ಪ್ರತಿ ಪಾದಿಸಿರುವಂತೆ ಈ ಮೂಲಭೂತ ಮಕ್ಕಳ ಹಕ್ಕನ್ನು ಕಾರ್ಯಗತಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾನೂನು ಬಾದ್ಯತೆಯನ್ನು ಹೊಂದಿದೆ.
Status of Compliance of Section 12 (1) (C) of RTE Act 2009 (2019-20)
Sl. No.
Name of District
Total no. of Private Unaided Schools (Recognised) in the State/ UT
Total intake capacity in Class-I or below in all Private Unaided Schools (Recognised)
25% of the intake capacity in Class-I or below in all Private Unaided Schools (Recognised)
Status of Admission of children as per Section 12 (1)(C) of RTE Act, 2009  in 2017-18
Nursery
Class-I
Total
No. of Private Unaided Schools admitting children
No. of Children admitted in Nursery in 2018
No. Of Children admitted in Class-I
2018
Total
DISE code of the Schools
1
2
3
4
5
6
7
8
9
10
11
12
1
RAMANAGARA
168
32
6
2
8
3
6
2
8
29320806411, 29320812307
3. ನಲಿ-ಕಲಿ:
                 ನಲಿ-ಕಲಿ ಹೆಸರೇ ಸೂಚಿಸುವಂತೆ ಕಲಿಕೆಯು ಚಟುವಟಿಕೆಯುಕ್ತವಾಗಿದ್ದು ಬಹುತರಗತಿ, ವಿವಿಧ ಹಂತದ ಮಕ್ಕಳು ಸ್ವ-ವÉೀಗ ಮತ್ತು ಕ್ರಿಯಾತ್ಮಕವಾಗಿ ಕಲಿಯಲು ಅನುಕೂಲಕರವಾದ ಒಂದು ಬೋಧನಾ ವಿಧಾನವಾಗಿರುತ್ತದೆ. ಇದರಲ್ಲಿ ಶಿಕ್ಷಕರು ಮಾರ್ಗದರ್ಶಕರಾಗಿರುತ್ತಾರೆ. ತರಗತಿ ಪ್ರಕ್ರಿಯೆ ಹೆಚ್ಚು ಹಿತಕರವಾಗಿದ್ದು, ಯಾವುದೇ ಪರೀಕ್ಷೆಯ ಒತ್ತಡವಿಲ್ಲದೇ ತನ್ನದೇ ಕಲಿಕಾ ವೇಗದಲ್ಲಿ ಕಲಿಯಲು ಸ್ವತಂತ್ರವಾಗಿರುತ್ತದೆ.
                ನಲಿ-ಕಲಿ ವಿಧಾನದಲ್ಲಿ ಬಹುವರ್ಗ ತರಗತಿಗಳಲ್ಲಿ ಮಕ್ಕಳು ಓದುವುದು, ಬರೆಯುವುದನ್ನು ಕಲಿಯುವುದೇ ಅಲ್ಲದೆ ಸಂತಸದಾಯಕ ಮತ್ತು ಕುತೂಹಲಭರಿತ ವಾತಾವರಣದಲ್ಲಿ ತಮ್ಮ ಸೃಜನಶೀಲತೆಯನ್ನು ಅಭಿವ್ಯಕ್ತಗೊಳಿಸುವರು. 1 ಮತ್ತು 2ನೇ ತರಗತಿ ಮಕ್ಕಳಿಗೆ, 2009-10 ರಲ್ಲಿ ಕರ್ನಾಟಕದ ಎಲ್ಲ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ ನಲಿ-ಕಲಿ ವಿಧಾನವನ್ನು ಆರಂಭಿಸಲಾಯಿತು. ಈ ವಿಧಾನದಲ್ಲಿ ಕಲಿಕೆಯ ಪ್ರಕ್ರಿಯೆಯುದ್ದಕ್ಕೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವುದರಿಂದ ಶಿಕ್ಷಕರ ಹೊರೆ ಕಡಿಮೆಯಾಗುತ್ತಿದೆ, ತರಗತಿಯಲ್ಲಿನ ಅಂತರ್‍ಕ್ರಿಯಾತ್ಮಕ ಪ್ರಕ್ರಿಯೆಯು ಗರಿಷ್ಠವಾಗುವುದರಿಂದ ಪರೀಕ್ಷೆಯ ಭಯ / ಆತಂಕ ಇಲ್ಲದಂತಾಗಿದೆ. ಕುತೂಹಲ, ಚಲನಶೀಲತೆ ಮತ್ತು ಪರಿಶೋಧನೆಯಂತಹ ಮಗುವಿನ ಸಹಜ ಪ್ರವೃತ್ತಿಗಳು ಸರಿಯಾದ ದಾರಿಯಲ್ಲಿ ಮುಂದುವರೆಯಲು ಹೆಚ್ಚಿನ ಅವಕಾಶಗಳು ದೊರೆಯುತ್ತಿವೆ.
ನಲಿ-ಕಲಿ ವಿಧಾನದ ತರಗತಿ ಪ್ರಕ್ರಿಯೆಯು ಶಿಕ್ಷಕರಿಗೆ ಹೆಚ್ಚಿನ ಸ್ವಾಯತ್ತತೆಯನ್ನು ಕೊಡುವುದರ ಜೊತೆಗೆ ಸಂತಸ ಮತ್ತು ಸ್ನೇಹಪರತೆಯಿಂದ ಕಲಿಯಲು ಮಗುವಿಗೆ ಸರಿಯಾದ ವಾತಾವರಣವನ್ನು ಸೃಜಿಸಲಾಗಿದೆ.
ಕಲಿಕೆಯು ವಯಸ್ಸಿಗನುಗುಣವಾಗಿ ಸಾಮಥ್ರ್ಯಾನುಸಾರ ಮಾಡಲಾದ ಗುಂಪುಗಳಲ್ಲಿ ಅಂತರ್‍ಕ್ರಿಯಾತ್ಮಕ ಪ್ರಕ್ರಿಯೆಗಳ ಮೂಲಕ ವ್ಯವಸ್ಥಿತವಾಗಿ ನಡೆಯುತ್ತಿದೆ.
ಮಕ್ಕಳು ಒಂದು ಗುಂಪಿನಲ್ಲಿ ನಿಗದಿತ ಸಾಮಥ್ರ್ಯವನ್ನು ಗಳಿಸಿಕೊಂಡ ಮೇಲೆ, ಮುಂದಿನ ಸಾಮಥ್ರ್ಯವನ್ನು ಕಲಿಯಲು ಅವರು ನಂತರದÀ ಗುಂಪಿಗೆ ಹೋಗುತ್ತಾರೆ.
                                                                                                                          ನಲಿ-ಕಲಿ ಶಾಲೆಯ ಕಲಿಕಾ ಚಪ್ಪರ
4. ಕರ್ನಾಟಕ ಪಬ್ಲಿಕ್ ಶಾಲೆ :
                      ಕರ್ನಾಟಕ ಸರ್ಕಾರವು”ಪ್ರತಿ ಮಗುವೂ ಶಾಲೆಯಲ್ಲಿ ಮತ್ತು ಉತ್ತಮ ಕಲಿಕೆಯೊಂದಿಗೆ” ಎಂಬ ಘೋಷ ನೀತಿಯನ್ನು ಅಳವಡಿಸಿಕೊಂಡಿದ್ದು, ಪ್ರತಿ ಮಗುವಿಗೂ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪರಿಚಯಿಸಿದೆ. ಪೂರ್ವ ಪ್ರಾಥಮಿಕ ಹಂತದಿಂದ ಪದವಿ ಪೂರ್ವ ಶಿಕ್ಷಣದ ಹಂತದವರೆವಿಗೂ ಒಂದೇ ಸೂರಿನಡಿ ಈ ಶಾಲೆಗಳಲ್ಲಿ ಸಮಗ್ರ ಶಿಕ್ಷಣವನ್ನು ಒದಗಿಸಲಾಗುತ್ತಿದೆ.ಕರ್ನಾಟಕ ಪಬ್ಲಿಕ್ ಶಾಲೆಗಳಿಗೆಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಪ್ರತ್ಯೇಕ ಸಂಘಟನೆ ಹಾಗೂ ಮಾರ್ಗಸೂಚಿಗಳನ್ನು ನಿಗದಿಪಡಿಸಲಾಗುವುದು. ಈ ಶಾಲೆಗೆ ಮೂಲಭೂತ ಸೌಕರ್ಯ, ಪ್ರಯೋಗಾಲಯ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಇತರೆ ಸಂಪನ್ಮೂಲಗಳನ್ನು ಒದಗಿಸುವುದರ ಮೂಲಕ ದಾಖಲಾತಿಯನ್ನು ಹೆಚ್ಚಿಸುವ ಮತ್ತು ಕಲಿಕೆಯನ್ನು ಉತ್ತಮ ಪಡಿಸುವುದರ ಜೊತೆಗೆ ಉನ್ನತ ಸಂಪನ್ಮೂಲ ಕೇಂದ್ರಗಳನ್ನಾಗಿ ಮಾರ್ಪಡಿಸುವುದು.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೆ.ಪಿ.ಎಸ್. ಶಾಲೆಗಳ ಪಟ್ಟಿ
ಕ್ರ.
ಸಂ.
 ಜಿಲ್ಲೆಯ ಹೆಸರು
ತಾಲ್ಲೂಕಿನ ಹೆಸರು
ಕೆಪಿಎಸ್ ಶಾಲೆಯ ಹೆಸರು
(ಪೂರ್ವ ಪ್ರಾಥಮಿಕ -12ನೇ ತರಗತಿವರೆಗೆ) ಮಕ್ಕಳ ಸಂಖ್ಯೆ
1
ಬೆಂಗಳೂರು ದಕ್ಷಿಣ
ಚನ್ನಪಟ್ಟಣ
ಕೆ.ಪಿ.ಎಸ್ ಅರಳಾಳುಸಂದ್ರ
 613
2
ಬೆಂಗಳೂರು ದಕ್ಷಿಣ
ಕನಕಪುರು
ಕೆ.ಪಿ.ಎಸ್ ಹಾರೋಹಳ್ಳಿ
1018
3
ಬೆಂಗಳೂರು ದಕ್ಷಿಣ
ಕನಕಪುರು
ಕೆ.ಪಿ.ಎಸ್ ದೊಡ್ಡಾಲಹಳ್ಳಿ
419
4
ಬೆಂಗಳೂರು ದಕ್ಷಿಣ
ಮಾಗಡಿ
ಕೆ.ಪಿ.ಎಸ್ ಕುದೂರು
1272
5
ಬೆಂಗಳೂರು ದಕ್ಷಿಣ
ಮಾಗಡಿ
ಕೆ.ಪಿ.ಎಸ್ ತಿಪ್ಪಸಂದ್ರ
362
6
ಬೆಂಗಳೂರು ದಕ್ಷಿಣ
ರಾಮನಗರ
ಕೆ.ಪಿ.ಎಸ್ ಅವ್ವೇರಹಳ್ಳಿ
430
             ಕೆ.ಪಿ.ಎಸ್ ಶಾಲೆ ಅರಳಾಳುಸಂದ್ರ, ಚನ್ನಪಟ್ಟಣ ತಾಲ್ಲೂಕು                                              ಕೆ.ಪಿ.ಎಸ್ ಶಾಲೆ ದೊಡ್ಡಾಲಹಳ್ಳಿ, ಕನಕಪುರ ತಾಲ್ಲೂಕು
5. ಆಂಗ್ಲ ಮಾಧ್ಯಮ ಶಾಲೆಗಳು:
         2019-20ನೇ ಸಾಲಿನಲ್ಲಿ ಪ್ರಸ್ತುತ 24 ಆಂಗ್ಲ ಮಾಧ್ಯಮ ಶಾಲೆಗಳು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಈ ಶಾಲೆಗಳಿಗೆ ಅಗತ್ಯವಿರುವ ಶಿಕ್ಷಕರ ಹಾಗೂ ಶಾಲಾ ಕೊಠಡಿಗಳ ಅವಶ್ಯಕತೆ ಇದ್ದು ಈ ಕೆಳಗಿನಂತೆ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತಿದೆ.
ಕ್ರ.
ಸಂ.
ತಾಲ್ಲೂಕಿನ ಹೆಸರು
ಶಾಲೆಯ ಹೆಸರು
 1ನೇ ತರಗತಿ ಆಂಗ್ಲ ಮಾಧ್ಯಮಕ್ಕೆ ದಾಖಲಾತಿ
1
ಚನ್ನಪಟ್ಟಣ
ಸರ್ಕಾರಿ ಉರ್ದು ಮಾದರಿ ಪ್ರಾಥಮಿಕ ಶಾಲೆ ಹಳೇ ಡೇರಾ (ಆರ್.ಎಂ.ಎಸ್.ಎ)
16
2
ಚನ್ನಪಟ್ಟಣ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುನಿಯಪ್ಪನದೊಡ್ಡಿ (ಆರ್.ಎಂ.ಎಸ್.ಎ)
28
3
ಚನ್ನಪಟ್ಟಣ