ತಾಲ್ಲೂಕುಗಳಲ್ಲಿನ ತಹಸೀಲ್ದಾರ್ ಪ್ರಮುಖ ಸರ್ಕಾರಿ ಅಧಿಕಾರಿಯಾಗಿದ್ದು, ಉಪವಿಭಾಗಾಧಿಕಾರಿಗಳ ತಕ್ಷಣ ಅಧೀನ ಅಧಿಕಾರಿಯಾಗಿದ್ದಾರೆ.
ತಾಲ್ಲೂಕು | ತಹಶೀಲ್ದಾರ್ ಹೆಸರು | ವಿಳಾಸ | ಸಂಪರ್ಕ ಸಂಖ್ಯೆ | ಇ-ಮೇಲ್ ಐಡಿ | |
---|---|---|---|---|---|
ಚನ್ನಪಟ್ಟಣ |
ನರಸಿಂಹಮೂರ್ತಿ
|
ತಾಲ್ಲೂಕು ಕಛೇರಿ, ಚನ್ನಪಟ್ಟಣ | 9845580432 | tahsilcpatna@gmail.com | |
ರಾಮನಗರ | ಶ್ರೀಮತಿ. ತೇಜಸ್ವಿನಿ | ತಾಲ್ಲೂಕು ಕಛೇರಿ, ರಾಮನಗರ | 9480608490 | rmgtahasildar@gmail.com |
|
ಕನಕಪುರ |
ಶ್ರೀಮತಿ.ಸ್ಮಿತಾ ರಾವ್
|
ತಾಲ್ಲೂಕು ಕಛೇರಿ, ಕನಕಪುರ | 7760966609 | tasildarkanakapura@gmail.com | |
ಮಾಗಡಿ |
ಶರತ್
|
ತಾಲ್ಲೂಕು ಕಛೇರಿ, ಮಾಗಡಿ | 9591330909 | tasilmagadi@gmail.com |
ತಾಲ್ಲೂಕು ಮಟ್ಟದ ತಹಶೀಲ್ದಾರ್ ರವರ ಜವಬ್ದಾರಿಯುತ ಕರ್ತವ್ಯವೆಂದರೆ ಭೂ ಕಂದಾಯ ವಸೂಲಿ ಮತ್ತು ಗ್ರಾಮ ಲೆಕ್ಕಿಗರ ಹಾಗೂ ರಾಜಸ್ವ ನಿರೀಕ್ಷಕರ ಕರ್ತವ್ಯಗಳನ್ನು ಸಮಪರ್ಕವಾಗಿ ನಿರ್ವಹಿಸುವುದು ಹಾಗೂ ಸಂಬಂಧಪಟ್ಟ ಗ್ರಾಮ ದಾಖಲೆಗಳನ್ನು ಆಗಿಂದಾಗ್ಗೆ ನಮೂದಿಸುವುದು. ತಹಶೀಲ್ದಾರ್ ರವರು ಹಕ್ಕು ದಾಖಲೆಗಳ ತಕರಾರು ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸುವುದು. ಪಹಣಿ ಪರಿಶೀಲನೆ, ಭೂ ಕಂದಾಯ ರಸೀದಿ, ಪಟ್ಟಾ ಬುಕ್ ಪರಿಶೀಲನೆ ಹಾಗೂ ಗ್ರಾಮದ ಪರಿಶೀಲನೆ. ಒತ್ತುವರಿ ತೆರವುಗೊಳಿಸಲು ವಿಶೇಷ ಗಮನಹರಿಸುವುದು. ತನ ತಾಲ್ಲೂಕು ಮಟ್ಟದ ಉಸ್ತುವಾರಿಯನ್ನು ನಿಬಾಯಿಸಲು ಆತ ಪ್ರವಾಸ ಕೈಗೊಂಡು ತನ್ನ ಗ್ರಾಮ ಲೆಕ್ಕಿಗರು ಮತ್ತು ರಾಜಸ್ವ ನಿರೀಕ್ಷಕರು ಅವರವರ ಕರ್ತವ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ನಿರ್ವಹಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪರಿಶೀಲನೆ ನಡೆಸುವುದು. ಒಂದು ಗ್ರಾಮದ ಸ್ಥಳ ತನಿಖೆ ನಂತರ ತಹಶೀಲ್ದಾರ್ ತನ್ನ ಗ್ರಾಮಲೆಕ್ಕಿಗರು ಮತ್ತು ರಾಜಸ್ವ ನಿರೀಕ್ಷಕರಿಗೆ ಕೊಟ್ಟಿರುವ ನಿರ್ದೇಶನಗಳನ್ನು ಲಿಖಿತ ರೂಪದಲ್ಲಿ ವರದಿ ಇಟ್ಟುಕೊಳ್ಳುವುದು. ತಹಶೀಲ್ದಾರ್ ಜವಬ್ದಾರಿಗಳು ಏನೆಂದರೆ ಸಾರ್ವಜನಿಕ ಕುಂದು ಕೊರತೆಗಳನ್ನು ಬಗೆಹರಿಸುವುದು ತಹಶೀಲ್ದಾರ್ ರವರು ಪ್ರಮುಖ ಸಾಮಗ್ರಿಗಳನ್ನು ಸರಬರಾಜು ಮಾಡಲು ಇಟ್ಟಿರುವ ಡಿಪೋಗಳನ್ನು ಪರಿಶೀಲಿಸಬೇಕು ಹಾಗೂ ದೃಶ್ ಕೃತ್ಯ ಗಳ ನಡೆಸಿರುವ ಕುರಿತು ಸ್ಥಳೀಯ ವಿಚಾರಣೆ ನಡೆಸುವುದು.
ತಹಶೀಲ್ದಾರ್ ರವರು ತಾಲ್ಲೂಕು ಮಟ್ಟದ ದಂಡಾಧಿಕಾರಿಯಾಗಿರುತ್ತಾರೆ. ತಾಲ್ಲೂಕು ಮಟ್ಟದ ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿರುತ್ತಾರೆ. ಭೂ ನ್ಯಾಯ ಮಂಡಳಿಯ ಕಾರ್ಯದರ್ಶಿ ಸಹಾ ಆಗಿರುತ್ತಾರೆ.
ತಹಸೀಲ್ದಾರ್ ಗೆ ಸಹಾಯ ಮಾಡಲು ಪ್ರತಿ ತಾಲ್ಲೂಕಿನಲ್ಲಿ ಉಪ ತಹಸೀಲ್ದಾರರನ್ನು ನೇಮಕ ಮಾಡಲಾಗಿದೆ. ರೆಕಾರ್ಡ್ ಆಫ್ ರೈಟ್ಸ್ ತಯಾರಿಕೆಯ ಹಂತದಲ್ಲಿ ಮತ್ತು ನಿರ್ವಹಣೆ ಹಂತದಲ್ಲಿ ಉದ್ಭವಿಸುವ ವಿವಾದಿತ ಪ್ರಕರಣಗಳಲ್ಲಿ ಆದೇಶಗಳನ್ನು ಕೇಳಬಹುದು ಮತ್ತು ರವಾನಿಸಬಹುದು.