ಮುಚ್ಚಿ

ಆರೋಗ್ಯ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 

ಕ್ರ. ಸ ಆರೋಗ್ಯ ಸಂಸ್ಥೆಗಳ ವಿವರ ಆರೋಗ್ಯ ಸಂಸ್ಥೆಗಳ ಸಂಖ್ಯೆ
1 ಜಿಲ್ಲಾ ಆಸ್ಪತ್ರೆ 1
2 ಸಾರ್ವಜನಿಕ ಆಸ್ಪತ್ರೆ 3
3 ಸಮುದಾಯ ಆರೋಗ್ಯ ಕೇಂದ್ರಗಳು 4
4 ಪ್ರಾಥಮಿಕ ಆರೋಗ್ಯ ಕೇಂದ್ರಗಳು 61
5 ಉಪ-ಕೇಂದ್ರಗಳು 240
6 ನಗರ ಆರೋಗ್ಯ ಕೇಂದ್ರ 4

 

ಕ್ರ. ಸ ಸಂಸ್ಥೆ ವಿವರಗಳು ಸ್ಥಳ ವೈದ್ಯರ ವಿವರಗಳು ಸಂಪರ್ಕ ವಿವರಗಳು ಇಮೇಲ್ ಐಡಿ
1 ಜಿಲ್ಲಾ ಆಸ್ಪತ್ರೆ ರಾಮನಗರ ಡಾ. ವಿವೇಕ್ ದೊರೈ 080-7272248 dsramanagaram@gmail.com
2 ಜನರಲ್ ಹಾಸ್ಪಿಟಲ್ ಮಾಗಡಿ ಡಾ. ರಾಜೇಶ್ 080-27745382 cmoghmagadi@gmail.com
3 ಜನರಲ್ ಹಾಸ್ಪಿಟಲ್ ಕನಕಪುರ ಡಾ. ವಾಸು ಕೆ. 080-27522485 ghkanakapura@gmail.com
4 ಜನರಲ್ ಹಾಸ್ಪಿಟಲ್ ಚನ್ನಪಟ್ಟಣ ಡಾ. ಅಶೋಕ್ 080-27251595 ghchannapatna@gmail.com

ರಾಮನಗರ ಜಿಲ್ಲೆಯಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಫಲಾನುಭವಿಗಳಿಗೆ ನೀಡುವಂತಹ ಪ್ರಮುಖ ಯೋಜನೆಗಳ ಸಂಕ್ಷಿಪ್ತ ಮಾಹಿತಿಗಳು ಈ ಕೆಳಕಂಡಂತಿವೆ

 •  ಜನನಿ ಸುರಕ್ಷಾಯೋಜನೆ (ಜೆ.ಎಸ್.ವೈ)

  ಸಾಂಸ್ಥಿಕ ಹೆರಿಗೆಗಳನ್ನು ಉತ್ತೇಜಿಸುವ ಸಲುವಾಗಿ ಸದರಿ ಯೋಜನೆ ಯಡಿಯಲ್ಲಿ ಮನೆಯಲ್ಲಿ ಹೆರಿಗೆಯಾದವರಿಗೆ ರೂ.500 ಗಳನ್ನು, ಗ್ರಾಮೀಣ ಹೆರಿಗೆಯಾದರೆ ರೂ.700 ಗಳನ್ನು, ನಗರ ಪ್ರದೇಶದ ಹೆರಿಗೆಯಾದರೆ ರೂ.600 ಗಳನ್ನು ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಸಿಜರಿಯನ್ ಹೆರಿಗೆಯಾದರೆ ರೂ.1500ಗಳನ್ನು ಮತ್ತು ಸಕಾ೵ರಿ ಆಸ್ಪತ್ರೆಯಲ್ಲಿ ಸಿಜರಿಯನ್ ಹೆರಿಗೆಯಾದರೆ ರೂ. 700ಗಳನ್ನು, ನೀಡಲಾಗುತ್ತದೆ. ಸದರಿ ಯೋಜನೆಯು ಎಸ್.ಸಿ., ಎಸ್.ಟಿ ಮತ್ತು ಬಿ.ಪಿ.ಎಲ್ ಹೊಂದಿರುವ ಮಹಿಳೆಯರಿಗೆ ಮಾತ್ರ ಅನ್ವಯವಾಗುತ್ತದೆ.

 • ಮಡಿಲುಯೋಜನೆ:-

  ಸಾಂಸ್ಥಿಕ ಹೆರಿಗೆಗಳನ್ನು ಉತ್ತೇಜಿಸುವ ಸಲುವಾಗಿ ಸದರಿ ಯೋಜನೆಯಡಿಯಲ್ಲಿ ಹೆರಿಗೆ ನಂರ ತಾಯಿ ಮತ್ತು ಮಗುವಿಗೆ ಅವಶ್ಯವಿರುವ ಒಂದು ಮಡಿಲು ಕಿಟ್ ನ್ನು ಒದಿಗಿಸಲಾಗುವುದು. ಸದರಿ ಯೋಜನೆಯು ಎಸ್.ಸಿ., ಎಸ್.ಟಿ ಮತ್ತು ಬಿ.ಪಿ.ಎಲ್ ಹೊಂದಿರುವ ಮಹಿಳೆಯರಿಗೆ ಎರಡು ಜೀವಂತ ಜನನಕ್ಕೆ ಮಾತ್ರ ಅನ್ವಯವಾಗುತ್ತದೆ.

 • ಪ್ರಸೂತಿ ಆರೈಕೆ:-

 • ಪ್ರಸೂತಿ ಆರೈಕೆ ಯೋಜನೆಯು ರಾಜ್ಯ ಸರ್ಕಾರಿದ ತಾಯಿಭಾಗ್ಯ ಯೋಜನೆಯ ಪ್ರಮುಖ ಭಾಗವಾಗಿದೆ. ಆದ್ದರಿಂದ, ಗರ್ಭಾವಸ್ಥೆಯ 2ನೇ ತ್ರೈಮಾಸಿಕದಲ್ಲಿ ರೂ.1000 ವನ್ನು ಒಂದು ಬಾರಿಗೆ, ನಂತರ ಗರ್ಭಿಣಿಯು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡು ಮನೆಗೆ ತೆರಳುವ ಮುನ್ನ ಜೆ.ಎಸ್.ವೈ. ಆರ್ಥಿಕ ಸಹಾಯಕಧವವೂ ಸೇರಿ ಎರಡನೇ ಬಾರಿಗೆ ರೂ.1000 ಗಳಂತೆ ಆರ್ಥಿಕ ಸಹಾಯಧನ ನೀಡುವ ಕಾರ್ಯಕ್ರಮವಾಗಿದೆ. ಸದರಿ ಯೋಜನೆಯು ಎಸ್.ಸಿ., ಎಸ್.ಟಿ ಮತ್ತು ಬಿ.ಪಿ.ಎಲ್. ಹೊಂದಿರುವ ಮಹಿಳೆಯರಿಗೆ ಎರಡು ಜೀವಂತ ಜನನಕ್ಕೆ ಮಾತ್ರ ಅನ್ವಯವಾಗುತ್ತದೆ.

 • 4. ತಾಯಿ ಭಾಗ್ಯ ಪ್ಲಸ್:-

  ತಾಯಿ ಭಾಗ್ಯ ಪ್ಲಸ್ ಯೋಜನೆಯು ರಾಜ್ಯ ಸರ್ಕಾರದ ತಾಯಿ ಭಾಗ್ಯ ಯೋಜನೆಯ ಪ್ರಮುಖ ಭಾಗವಾಗಿದೆ. ಆದ್ದರಿದ ಗರ್ಭಿಣಿಯು ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಕೊಂಡರೆ ರೂ. 1000ಗಳಂತೆ ಆರ್ಥಿಕ ಸಹಾಯಧನ ನೀಡುವ ಕಾರ್ಯಕ್ರಮವಾಗಿದೆ. ಸದರಿ ಯೋಜನೆಯು ಎಸ್.ಸಿ., ಎಸ್.ಟಿ. ಮತ್ತು ಬಿ.ಪಿ.ಎಲ್ ಹೊಂದಿರುವ ಮಹಿಳೆಯರಿಗೆ ಎರಡು ಜೀವಂತ ಜನನಕ್ಕೆ ಮಾತ್ರ ಅನ್ವಯವಾಗುತ್ತದೆ.

 • 5.ಜನನಿ ಶಿಶು  ಸುರಕ್ಷಾ ಕಾರ್ಯಕ್ರಮ (ಜೆ.ಎಸ್.ಎಸ್.ಕೆ):-

  ತಾಯಿ-ಮಗುವಿನ ಆರೋಗ್ಯವನ್ನು ಸುಧಾರಣೆ ಮಾಡುವುದಕ್ಕಾಗಿ ಸರ್ಕಾರವು ಜೆ.ಎಸ್.ಎಸ್.ಕೆ. ಕಾರ್ಯಕ್ರಗಳನ್ನು ಹಮ್ಮಿಕೊಂಡಿದೆ. ಎಲ್ಲಾ ಗರ್ಭಿಣಿ ಸ್ತ್ರೀಯರಿಗೆ ಅಗತ್ಯವಿರುವ ಪ್ರಸವಪೂರ್ವ, ಪ್ರಸವವೇಳೆ, ಪ್ರಸವ ನಂತರದ ಸೇವೆಗಳನ್ನು ಉಚಿತವಾಗಿ ನೀಡುವ ಕಾರ್ಯಕ್ರಮವಾಗಿರುತ್ತದೆ. ಉದಾಹರಣೆಗೆ ಪ್ರಯೋಗ ಶಾಲಾಸೇವೆಗಳು, ಔಷಧಿಗಳು, ಹೆರಿಗೆ ಸಮಯದಲ್ಲಿ ಊಟದ ವ್ಯವಸ್ಥೆ, ರಕ್ತ ನೀಡುವುದು ಹಾಗೂ ಸಾರಿಗೆ ವೆಚ್ಚ ಮುಂತಾದವುಗಳಾಗಿರುತ್ತವೆ. ಸದರಿ ಯೋಜನೆಯು ಎ.ಪಿ.ಎಲ್ ಮತ್ತು ಬಿ.ಪಿ.ಎಲ್ ಹೊಂದಿರುವ ಮಹಿಳೆಯರಿಗೆ ಎರಡು ಜೀವಂತ ಜನನಕ್ಕೆ ಮಾತ್ರ ಅನ್ವಯವಾಗುತ್ತದೆ.